ಹೋಳಿ ಆಚರಣೆ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಕಿರುಕುಳ, ತಪ್ಪಿತಸ್ಥರಿಗೆ ಮಾದರಿ ಶಿಕ್ಷೆಯಾಗಬೇಕು: ಉ.ಪ್ರ WIM

Prasthutha|

ಉತ್ತರಪ್ರದೇಶ: ಬಿಜ್ನೋರ್‌ನಲ್ಲಿ ಹೋಳಿ ಆಚರಣೆಯ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಿರುವುದು ಅತ್ಯಂತ ವಿಷಾದನೀಯ ಮತ್ತು ತಪ್ಪಿತಸ್ಥರನ್ನು ಮಾದರಿಯಾಗಿ ಶಿಕ್ಷಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ಉತ್ತರ ಪ್ರದೇಶ ರಾಜ್ಯಾಧ್ಯಕ್ಷೆ ಆಶಿಫಾ ಆಗ್ರಹಿಸಿದ್ದಾರೆ.

- Advertisement -

ಹೋಳಿ ಆಚರಣೆ ಅಥವಾ ಆಚರಣೆಗಳ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಧರ್ಮದ ಆಚರಣೆಗಳನ್ನು ಇತರರ ಮೇಲೆ ಹೇರುವುದು ದೇಶದ ಸಾಮಾಜಿಕ ಸಂಸ್ಕೃತಿಗೆ ವಿರುದ್ಧವಾಗಿದೆ. ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಚಟುವಟಿಕೆಗಳಿಂದ ಎಲ್ಲರೂ ದೂರವಿರಬೇಕು ಎಂದು ಆಶಿಫಾ ಹೇಳಿದ್ದಾರೆ.



Join Whatsapp