ಕುಡಿದ ಮತ್ತಿನಲ್ಲಿ ಯುವತಿಗೆ ಕಿರುಕುಳ| ಟಿಟಿಇ ಅಮಾನತು

Prasthutha|

ಬೆಂಗಳೂರು: ಟಿಕೆಟ್ ಚೆಕ್ಕಿಂಗ್ ವೇಳೆ ಕುಡಿದ ಮತ್ತಿನಲ್ಲಿದ್ದ ರೈಲ್ವೇ ಟಿಕೆಟ್ ಪರೀಕ್ಷಕ(ಟಿಟಿಇ) ಯುವತಿಗೆ ಕಿರುಕುಳ ನೀಡಿದ್ದು, ಈ ಕುರಿತ ವೀಡಿಯೋ ವೈರಲಾಗುತ್ತಿದ್ದಂತೆಯೇ ಆತನನ್ನು ಅಮಾನತು ಮಾಡಲಾಗಿದೆ.

- Advertisement -

ಬೆಂಗಳೂರಿನ KR ಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕೆ ತನ್ನ ಮೇಲೆ ಟಿಟಿಇ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅಳುತ್ತಿರುವುದನ್ನು ವೀಡಿಯೋದಲ್ಲಿ ಸೆರೆಯಾಗಿದೆ.

ಪ್ರಯಾಣಿಕರು ಯುವತಿಯ ಸಹಾಯಕ್ಕೆ ನಿಂತಿದ್ದು, ಪೊಲೀಸರಿಗೆ ಕರೆ ಮಾಡಿ ಎಂದು ಆಕೆಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಯುವತಿ ಮತ್ತು ಟಿಟಿಇ ನಡುವೆ ತೀವ್ರ ವಾಗ್ವಾದ ನಡೆದಿದೆ.

- Advertisement -

ಟಿಟಿಇ ಕುಡಿದ ಮತ್ತಿನಲ್ಲಿದ್ದು, ಟಿಕೆಟ್ ​​ಕೊಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಆತನನ್ನು ನೈಋತ್ಯ ರೈಲ್ವೆ ಇಲಾಖೆ ಅಮಾನತುಗೊಳಿಸಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

Join Whatsapp