ಬೆಂಗಳೂರು: ಟಿಕೆಟ್ ಚೆಕ್ಕಿಂಗ್ ವೇಳೆ ಕುಡಿದ ಮತ್ತಿನಲ್ಲಿದ್ದ ರೈಲ್ವೇ ಟಿಕೆಟ್ ಪರೀಕ್ಷಕ(ಟಿಟಿಇ) ಯುವತಿಗೆ ಕಿರುಕುಳ ನೀಡಿದ್ದು, ಈ ಕುರಿತ ವೀಡಿಯೋ ವೈರಲಾಗುತ್ತಿದ್ದಂತೆಯೇ ಆತನನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ KR ಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕೆ ತನ್ನ ಮೇಲೆ ಟಿಟಿಇ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅಳುತ್ತಿರುವುದನ್ನು ವೀಡಿಯೋದಲ್ಲಿ ಸೆರೆಯಾಗಿದೆ.
ಪ್ರಯಾಣಿಕರು ಯುವತಿಯ ಸಹಾಯಕ್ಕೆ ನಿಂತಿದ್ದು, ಪೊಲೀಸರಿಗೆ ಕರೆ ಮಾಡಿ ಎಂದು ಆಕೆಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಯುವತಿ ಮತ್ತು ಟಿಟಿಇ ನಡುವೆ ತೀವ್ರ ವಾಗ್ವಾದ ನಡೆದಿದೆ.
ಟಿಟಿಇ ಕುಡಿದ ಮತ್ತಿನಲ್ಲಿದ್ದು, ಟಿಕೆಟ್ ಕೊಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಆತನನ್ನು ನೈಋತ್ಯ ರೈಲ್ವೆ ಇಲಾಖೆ ಅಮಾನತುಗೊಳಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.