ಜೈಲಿನಲ್ಲಿ ನನಗೆ ಕಿರುಕುಳ ಮತ್ತು ಹಲ್ಲೆ; ದಿಲ್ಲಿ ಕೋರ್ಟಿಗೆ ಶಾರ್ಜೀಲ್ ಇಮಾಮ್

Prasthutha|

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಯ-ಜೆಎನ್ ಯು ವಿದ್ಯಾರ್ಥಿಯಾಗಿದ್ದ ಶಾರ್ಜೀಲ್ ಇಮಾಮ್ ಅವರು 2020ರ ದಿಲ್ಲಿ ಗಲಭೆ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿ ಅಸಿಸ್ಟೆಂಟ್ ಸೂಪರಿನ್ ಟೆಂಡೆಂಟ್ ಸಮ್ಮುಖದಲ್ಲಿಯೇ ಸೆರೆಯಾಳುಗಳು ನನಗೆ ಕಿರುಕುಳ ನೀಡಿದ್ದಲ್ಲದೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸೋಮವಾರ ದಿಲ್ಲಿ ಕೋರ್ಟಿಗೆ ಇಮಾಮ್ ಅರ್ಜಿ ಸಲ್ಲಿಸಿದ್ದಾರೆ.

- Advertisement -

ನನ್ನನ್ನು ಜೈಲಿನಲ್ಲಿ ಉಗ್ರಗಾಮಿ ಎಂದು ಕರೆದಿರುವುದಲ್ಲದೆ, ದೇಶದ್ರೋಹಿ ಎಂದು ಹೇಳಿದ್ದಾರೆ. ಇಮಾಮರ ವಕೀಲರಾದ ಅಹ್ಮದ್ ಇಬ್ರಾಹಿಂ ಅವರು ಜೂನ್ 30ರಂದು ಪ್ರಕರಣದ ಅರ್ಜಿ ಸಂಬಂಧ 7:30ರ ಸುಮಾರಿಗೆ ಇಮಾಮ್ ರನ್ನು ಭೇಟಿ ಮಾಡಿದಾಗ ಅವರು ಈ ವಿಷಯ ತಿಳಿಸಿದರು.

  ಅಸಿಸ್ಟೆಂಟ್ ಸೂಪರಿನ್ ಟೆಂಡೆಂಟ್ ಅವರು ಶಾರ್ಜೀಲ್ ಅವರ ಜೈಲಿನ ಕೋಣೆ ತಪಾಸಣೆಯ ನೆಪದಲ್ಲಿ ಬಂದಾಗ ಅವರೊಂದಿಗೆ 8-9 ಮಂದಿ ಕೈದಿಗಳು ಕೂಡ ಬಂದಿದ್ದರು. ಅವರು ಶಾರ್ಜೀಲ್ ಗೆ ಹಲ್ಲೆ ನಡೆಸಿದರು ಎಂದು ದೂರಲಾಗಿದೆ.

- Advertisement -

ಇಮಾಮ್ ಅವರು ಸೂಪರಿನ್ ಟೆಂಡೆಂಟರಲ್ಲಿ ಈ ಸಂಬಂಧ ಸಹಾಯ ಕೇಳಿದಾಗ ಅವರಿಂದ ಯಾವುದೇ ರೀತಿಯ ಸಹಾಯ ದೊರೆಯಲಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ಬಗೆಗೆ ಇಮಾಮ್ ಅವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ‘ಅಸಿಸ್ಟೆಂಟ್ ಸೂಪರಿನ್ ಟೆಂಡೆಂಟ್ ಕಾನೂನು ಬಾಹಿರ ಕುಕೃತ್ಯಗಳಲ್ಲಿ ತೊಡಗಿದ್ದಾರೆ’ ಎಂದು ದೂರಿರುವುದಾಗಿ ಲಿವ್ ಲಾ ವರದಿ ಮಾಡಿದೆ.

ಇಮಾಮ್ ಮೇಲೆ ಹಲ್ಲೆ ನಡೆದಾಗ ಮತ್ತು ಕೆಟ್ಟ ಭಾಷೆ ಪ್ರಯೋಗವಾದಾಗಿನ ಸಿಸಿಟಿವಿ ದೃಶ್ಯಾವಳಿಯನ್ನು ರಕ್ಷಿಸಿಡುವಂತೆ ಜೈಲಿನ ಅಧಿಕಾರಿಗಳಿಗೆ ಕೇಳಿಕೊಂಡಿದ್ದು, ಅದನ್ನು ಪಡೆಯಲು ನಿಯಮಾನುವಾಸ ಅರ್ಜಿ ಸಲ್ಲಿಸಲಾಗಿದೆ. 

ಎಡಿಶನಲ್ ಸೆಶನ್ಸ್ ಜಡ್ಜ್ ಅಮಿತಾಬ್ ರಾವತ್ ಮುಂದೆ ಅರ್ಜಿ ಬಂದಿದೆ. ಅವರು ಲಭ್ಯವಿಲ್ಲದ್ದರಿಂದ ಬೇರೆ ಜಡ್ಜ್ ರಿಗೆ ವಹಿಸಿದ ಕಾರಣ ಅವರು ಜುಲೈ 14ಕ್ಕೆ ಪ್ರಕರಣದ ವಿಚಾರಣೆಗೆ ದಿನಾಂಕ ಗೊತ್ತು ಮಾಡಿದ್ದಾರೆ.



Join Whatsapp