ಮಡಿಕೇರಿ: ತೋಟದ ಮಾಲೀಕರಿಂದ ಚಿತ್ರಹಿಂಸೆಗೆ ಒಳಗಾಗಿರುವ ಚಾಲಕನೊಬ್ಬ ತನ್ನ ಕುಟುಂಬದೊಂದಿಗೆ ರಾಷ್ಟ್ರಪತಿಗಳ ಮುಂದೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾನೆ.
ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಸುಬ್ರಮಣಿ ಎಂಬುವವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
ಸುಬ್ರಮಣಿ 250 ಎಕರೆ ಎಸ್ಟೇಟ್ ನಲ್ಲಿ 25 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮಾಲೀಕರು ನೀಡಿದ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಆದರೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ ನಂತರ, ಎಸ್ಟೇಟ್ ಮಾಲೀಕ ಅಣ್ಣಾಮಲೈ ಅವರನ್ನು ಕ್ವಾರ್ಟರ್ಸ್ ಖಾಲಿ ಮಾಡುವಂತೆ ಕೇಳಿಕೊಂಡಿದ್ದರು. ತನ್ನ 12 ಲಕ್ಷ ರೂಪಾಯಿಗಳನ್ನು ಪಾವತಿಸಿದ ನಂತರ ನಾನು ಹೊರಗೆ ಹೋಗುತ್ತೇನೆ ಎಂದು ಸುಬ್ರಮಣಿ ಸಮರ್ಥಿಸಿಕೊಂಡಿದ್ದರಿಂದ ಕುಪಿತಗೊಂಡ ಅಣ್ಣಾಮಲೈ ಜೆಸಿಬಿಯಿಂದ ಸುಬ್ರಮಣಿ ಮನೆಯ ಸುತ್ತ ರಾತ್ರೋರಾತ್ರಿ 15 ಅಡಿ ಕಂದಕ ತೋಡಿದ್ದಲ್ಲದೆ, ವಿದ್ಯುತ್, ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ.
ಜಮೀನಿನ ಮೂಲಕ ಹೊರಗೆ ಬರಲು ಕುಟುಂಬ ಸದಸ್ಯರು ಪರದಾಡುತ್ತಿದ್ದಾರೆ. ಈ ಸಂಬಂಧ ಸುಬ್ರಮಣಿ ಕುಟುಂಬದವರು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಎರಡು ದೂರು ನೀಡಿದ್ದಾರೆ.
ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ತಾನು ಅಸಹಾಯಕನಾಗಿದ್ದೇನೆ ಎಂದು ಸುಬ್ರಮಣಿ, ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.