ಹನುಮಾನ್ ಜನ್ಮಸ್ಥಳ ವಿವಾದ: ಮಹಂತ ಗೋವಿಂದಾನಂದ ರಥಯಾತ್ರೆ ನಿಲ್ಲಿಸುವಂತೆ ಗ್ರಾಮಸ್ಥರ ಆಗ್ರಹ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಕುರಿತು ನಡೆಯುತ್ತಿರುವ ಗಲಾಟೆಯ ನಡುವೆಯೇ ಹನುಮಾನ್ ಜನ್ಮಸ್ಥಳ ವಿವಾದ ತೀವ್ರಗೊಳ್ಳುತ್ತಿದೆ. ಮಹಂತ ಗೋವಿಂದಾನಂದ ರಥಯಾತ್ರೆ ನಿಲ್ಲಿಸುವಂತೆ ಕೋರಿ ಆಂಜನೇರಿ ಗ್ರಾಮದ ಜನತೆ ಪೊಲೀಸರಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.

- Advertisement -

ಕರ್ನಾಟಕದ ಕಿಷ್ಕಿಂಧೆಯ ಮಹಂತ್ ಗೋವಿಂದಾನಂದ ಅವರು ಹನುಮಂತ ನಾಸಿಕ್ ನ ಆಂಜನೇರಿಯಲ್ಲಿ ಇಲ್ಲ, ಆತ ಕರ್ನಾಟಕದ ಕಿಷ್ಕಿಂದೆಯಲ್ಲಿ ಜನಿಸಿದನು ಎಂದು ಪ್ರತಿಪಾದಿಸುತ್ತಿದ್ದು,  ಈ ಬಗ್ಗೆ ತಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳೂ ಇವೆ ಎಂದು ಹೇಳಿದ್ದಾರೆ. ಅಲ್ಲದೆ ಅವರು ಇಂದು ನಾಸಿಕ್ ನ ಬಿಟ್ಕೊ ಚೌಕ್ ನಿಂದ ಮಹರ್ಷಿ ಪಂಚಾಯತ್ ಸಿದ್ಧಪೀಠದವರೆಗೆ ರಥಯಾತ್ರೆಯನ್ನು ಆಯೋಜಿಸಿದ್ದಾರೆ.

ಮತ್ತೊಂದೆಡೆ, ಮಹಂತ್  ರ ಹೇಳಿಕೆಯಿಂದ ಆಕ್ರೋಶಗೊಂಡ ಆಂಜನೇರಿ ಗ್ರಾಮದ ಜನರು, ಪೊಲೀಸ್ ಠಾಣೆಗೆ ಆಗಮಿಸಿ ಅವರ ವಿರುದ್ಧ ದೂರು ನೀಡಿದ್ದು, ಇದನ್ನು ನಿಷೇಧಿಸಿ ಇಂದಿನ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.  ಹನುಮನ ಜನ್ಮಸ್ಥಳ ಅಂಜನೇರಿ ಗುಹೆಯ ಹಿಂಭಾಗದಲ್ಲಿರುವ ಕಿಷ್ಕಿಂಧಾ ಬೆಟ್ಟದಲ್ಲಿದೆ ಎಂದು ಗ್ರಾಮದ ಜನರು ಹೇಳಿದ್ದಾರೆ.

- Advertisement -

ಬುಧವಾರ ನಾಸಿಕ್  ನಲ್ಲಿ ಕಿಷ್ಕಿಂಧೆಯ ಮಹಂತ್ ರಿಂದ ಚರ್ಚೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಋಷಿಗಳು, ಮಹಂತರು,    ಇತಿಹಾಸಕಾರರು ಭಾಗವಹಿಸಿದ್ದಾರೆ. ಹನುಮನ  ಜನ್ಮಸ್ಥಳದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸಂಜೆಯೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

Join Whatsapp