ಭಟ್ಕಳ: ಇಲ್ಲಿನ ತೆಂಗಿನಗುಂಡಿ ಸಮುದ್ರ ತೀರದಲ್ಲಿ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಅನಂತ್ ಕಮಾರ್ ಹೆಗಡೆ ಸೇರಿ 20 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯಕ್ ಸೇರಿದಂತೆ 20 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 153ಎ ಅನ್ವಯ ಪ್ರಕರಣ ದಾಖಲಾಗಿದೆ.
ಭಟ್ಕಳದ ತೆಂಗಿನಗುಂಡಿಯ ಸಮುದ್ರ ತೀರದಲ್ಲಿ ತೆರವುಗೊಳಿಸಲಾಗಿದ್ದ ಸಾರ್ವಕರ್ ಕಟ್ಟೆಯಿದ್ದ ಜಾಗದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಮಾಜಿ ಶಾಸಕ ಸುನಿಲ್ ನಾಯ್ಕ್ ಕಾನೂನು ಬಾಹಿರವಾಗಿ ಹನುಮಧ್ವಜ ಹಾರಿಸಿದ್ದರು.