ಫೆಲೆಸ್ತೀನ್ ಬಣಗಳ ಮಧ್ಯೆ ರಾಷ್ಟ್ರೀಯ ಸಂಧಾನದ ಪ್ರಯತ್ನ ಮುಂದುವರಿಯಲಿದೆ: ಹಮಸ್

Prasthutha|

ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವುದಕ್ಕಾಗಿ ಸಂಧಾನವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಲವು ಫೆಲೆಸ್ತೀನ್ ಬಣಗಳ ಮಧ್ಯೆ ರಾಷ್ಟ್ರೀಯ ಸಂವಾದವನ್ನು ನಡೆಸುವ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹಮಸ್ ಪ್ರತಿರೋಧ ಆಂದೋಲನದ ರಾಜಕೀಯ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

- Advertisement -

“ಝಿಯೋನಿಸ್ಟ್ ಆಕ್ರಮಣ ಮತ್ತು ಫೆಲೆಸ್ತೀನ್ ಧ್ಯೇಯವನ್ನು ಮಟ್ಟಹಾಕುವ ಮತ್ತು ಭೂಮಿ, ಪಾವಿತ್ರ್ಯತೆ ಹಾಗೂ ಮರಳುವ ನಮ್ಮ ಹಕ್ಕನ್ನು ನಿರಾಕರಿಸುವ ಅವರ ಯೋಜನೆಗಳನ್ನು ಎದುರಿಸಲು ರಾಷ್ಟ್ರೀಯ ಐಕ್ಯತೆಯು ಮೂಲಾಧಾರವಾಗಿದೆ” ಎಂದು ಇಸ್ಮಾಯೀಲ್ ಹನಿಯ್ಯಾ ಶುಕ್ರವಾರ ಹೇಳಿದ್ದಾರೆ.

ಇಸ್ರೇಲಿ ಆಡಳಿತದ ವಿರುದ್ಧದ ರಾಷ್ಟ್ರೀಯ ಸಂಧಾನವನ್ನು ‘ಯಶಸ್ವಿ’ಗೊಳಿಸುವುದಕ್ಕಾಗಿ ಫತಹ್ ರಾಜಕೀಯ ಆಂದೋಲನ ಮತ್ತು ಇತರ ರಾಷ್ಟ್ರೀಯ ಹಾಗೂ ಇಸ್ಲಾಮಿಕ್ ಬಣಗಳೊಂದಿಗೆ ಹಮಸ್ ‘ಆಂತರಿಕ ಮತ್ತು ಬಾಹ್ಯ ಸಂಪರ್ಕ’ಗಳನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.



Join Whatsapp