21ನೇ ವಯಸ್ಸಿಗೆ ಪೈಲೆಟ್ ಆದ ಮಂಗಳೂರಿನ ಹನಿಯಾ ಹನೀಫ್

Prasthutha|

ಮಂಗಳೂರು: ಕರಾವಳಿ ಮೂಲದ ಯುವತಿಯೊಬ್ಬಳು ತನ್ನ 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

- Advertisement -


ಹನಿಯಾ ಹನೀಫ್ ಅವರು ಮಂಗಳೂರಿನ ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತ್ರಿಯಾಗಿದ್ದಾರೆ.


ಹನಿಯಾ ಅವರು 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಬಳಿಕ ಮಂಗಳೂರಿನಲ್ಲಿ ಪೂರ್ತಿಗೊಳಿಸಿದ್ದರು. ಚಿಕ್ಕಂದಿನಿಂದಲೇ ವಿದೇಶಕ್ಕೆ ಹೋಗುತ್ತಿದ್ದ ಕಾರಣ ವಿಮಾನಗಳ ಹಾರಾಟ ಕಂಡು ಪೈಲೆಟ್ ಹಾಗಬೇಕು ಎಂದು ಹನಿಯಾ ದೃಢ ನಿರ್ಧಾರಕ್ಕೆ ಬಂದಿದ್ದರು.

- Advertisement -


ತನ್ನ ಪಿಯುಸಿ ಶಿಕ್ಷಣದ ಬಳಿಕ ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡಮಿಯಲ್ಲಿ ಪೈಲಟ್ ತರಬೇತಿಗೆ ಸೇರಿ ಮೂರೂವರೆ ವರ್ಷ ತರಬೇತಿ ಪಡೆದು, ಒಟ್ಟು 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ ಬಳಿಕ ಕಮರ್ಶಿಯಲ್ ಪೈಲಟ್ ಪರವಾನಿಗೆಯನ್ನು ಹನಿಯಾ ತನ್ನದಾಗಿಸಿಕೊಂಡಿದ್ದಾರೆ.



Join Whatsapp