ಬಾಲಿವುಡ್ ಗಾಯಕ ಹನಿಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್!

Prasthutha|

ದೆಹಲಿ, ಆ.4: ಬಾಲಿವುಡ್‌ ಗಾಯಕ ಯೋ, ಯೋ ಹನಿಸಿಂಗ್‌ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್‌ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ  ದೂರು ದಾಖಲಿಸಿದ್ದಾರೆ.

- Advertisement -

ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಶಾಲಿನಿ ಪರ ವಕೀಲರಾದ ಸಂದೀಪ್‌ ಕಪೂರ್ ತಿಳಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಹನಿಸಿಂಗ್‌ ಅವರಿಗೆ ಆಗಸ್ಟ್‌ 28ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.

- Advertisement -

2011ರಲ್ಲಿ ಹನಿ ಸಿಂಗ್​ ಮತ್ತು ಶಾಲಿನಿ ತಲ್ವಾರ್​ ಮದುವೆ ನೆರವೇರಿತ್ತು. ಹತ್ತು ವರ್ಷಗಳ ಕಾಲ ಹನಿ ಸಿಂಗ್​ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ ಅನೇಕ ಹಿಂಸೆ ಅನುಭವಿಸಿದ್ದಾರೆ. ಕೋರ್ಟ್​ಗೆ ಸಲ್ಲಿಸಿದ ದೂರಿನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.

ಒಂದು ಕಾಲದಲ್ಲಿ ಬಹುಬೇಡಿಕೆಯ ಗಾಯಕನಾಗಿದ್ದ ಹನಿ ಸಿಂಗ್​ ಗೆ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ಅವರ ಪತ್ನಿ ಕೋರ್ಟ್​ ಮೆಟ್ಟಿಲು ಏರಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ.

Join Whatsapp