ಐ.ಎಸ್.ಐಗೆ ಮಾಹಿತಿ ರವಾನೆ: ಎಚ್.ಎ.ಎಲ್ ಸಿಬ್ಬಂದಿಯ ಬಂಧನ

Prasthutha|

ಮುಂಬೈ: ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವಿಸ್ ಇಂಟಲಿಜೆನ್ಸ್ (ಐ.ಎಸ್.ಐ)ಗೆ ಯುದ್ಧ ವಿಮಾನಗಳ ಕುರಿತು ರಹಸ್ಯ ಮಾಹಿತಿಗಳನ್ನು ರವಾನಿಸಿದ್ದಕ್ಕಾಗಿ ಹಿಂದುಸ್ಥಾನ್ ಏರೋನ್ಯಾಟಿಕ್ ಲಿಮಿಟೆಡ್ (ಎಚ್.ಎ.ಎಲ್) ನ ಸಿಬ್ಬಂದಿಯೋರ್ವನನ್ನು ಮಹಾರಾಷ್ಟ್ರ ಎ.ಟಿ.ಎಸ್ ಬಂಧಿಸಿದೆ.

ಆರೋಪಿಯನ್ನು ನಾಶಿಕ್ ಜಿಲ್ಲೆಯಲ್ಲಿರುವ ಎಚ್.ಎ.ಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಶ್ರೀಸತ್ ಎಂದು ಗುರುತಿಸಲಾಗಿದೆ.

- Advertisement -

ವಿಮಾನ ಮತ್ತು ಅದರ ರಹಸ್ಯ ವಿವರಗಳನ್ನು ಆರೋಪಿ ರವಾನಿಸುತ್ತಿದ್ದ ಎಂದು ಎ.ಟಿ.ಎಸ್. ಹೇಳಿದೆ. ಆರೋಪಿಯ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ 1923 ರ 3,4 ಮತ್ತು 5 ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ. ಐದು ಸಿಮ್ ಗಳಿರುವ ಮೂರು ಮೊಬೈಲ್ ಫೋನ್ ಮತ್ತು ಎರಡು ಮೆಮೊರಿ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -