ಮೇ 15ರಂದು ಸಿಟಿಗೋಲ್ಡ್ ವತಿಯಿಂದ ಹಜ್ಜ್, ಉಮ್ರಾ ತರಬೇತಿ ಶಿಬಿರ

Prasthutha|


ಮಂಗಳೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸಿಟಿಗೋಲ್ಡ್ ವತಿಯಿಂದ ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಮೇ 15ರಂದು ಸೋಮವಾರ ಹಜ್ಜ್ ಮತ್ತು ಉಮ್ರಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

- Advertisement -

ಮಂಗಳೂರಿನ ಕಂಕನಾಡಿಯಲ್ಲಿರುವ ಜಂಇಯತುಲ್-ಫಲಾಹ್ ಸಭಾಂಗಣದಲ್ಲಿ ಬೆಳಿಗ್ಗೆ 9:30 ರಿಂದ 1:00 ರವರೆಗೆ ಶಿಬಿರ ನಡೆಯಲಿದ್ದು, ಹಜ್ ಯಾತ್ರೆ ನಿರ್ವಹಿಸುವವರು ಎಲ್ಲರೂ ಭಾಗವಹಿಸಿ ಸದುಪಯೋಗವನ್ನು ಪಡೆಯಬಹುದು.   

ಬಪ್ಪಲಿಗೆ ಜುಮಾ ಮಸ್ಜಿದ್ ಖತೀಬರಾದ ಹಾಜಿ ಸಿರಾಜುದ್ದೀನ್ ಫೈಝಿ ಯಾತ್ರಾರ್ಥಿಗಳಿಗೆ ಹಜ್ಜ್ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಹಾಗೂ ಪ್ರಾತ್ಯಕ್ಷಿಕೆ ಮೂಲಕ ವಿವರಣೆಯನ್ನು ನೀಡಲಿದ್ದಾರೆ.

- Advertisement -

ಹೆಚ್ಚಿನ ವಿವರಗಳಿಗೆ 9995483444, / 9844352402 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಿಟಿಗೋಲ್ಡ್ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp