60,000 ಸೌದಿ ಪ್ರಜೆ ಮತ್ತು ನಿವಾಸಿಗಳಿಗೆ ಮಾತ್ರ ಈ ಬಾರಿ ಹಜ್ ನಿರ್ವಹಿಸಲು ಅವಕಾಶ

Prasthutha|

►ವಿದೇಶಿಗರಿಗೆ ಈ ಬಾರಿಯೂ ಅನುಮತಿಯಿಲ್ಲ

- Advertisement -

ರಿಯಾದ್ : ಕೋವಿಡ್ ಸಾಂಕ್ರಾಮಿಕದ ಭೀತಿಯಿಂದ ಸೌದಿ ಅರೇಬಿಯಾ ಈ ಬಾರಿಯೂ ವಿದೇಶಿಗರಿಗೆ ಹಜ್ ಮಾಡುವ ಅವಕಾಶವನ್ನು ನೀಡಿಲ್ಲ. ಸೌದಿ ಅರೇಬಿಯಾದಲ್ಲಿರುವ ಕೇವಲ 60,000 ಯಾತ್ರಾರ್ಥಿಗಳಿಗೆ ಮಾತ್ರ ಈ ಬಾರಿ ಹಜ್ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸೌದಿ ಹಜ್ ಮತ್ತು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ವರ್ಷವೂ ಕೋವಿಡ್ ಕಾರಣದಿಂದಾಗಿ ಜಾಗತಿಕ ರಾಷ್ಟ್ರಗಳ ಹಜ್ ಯಾತ್ರಾರ್ಥಿಗಳಿಗೆ ಹಜ್ ನಿರ್ವಹಿಸುವ ಅವಕಾಶ ನೀಡಿರಲಿಲ್ಲ.

Join Whatsapp