ಹಜ್ಜ್ 2022 ಯಾತ್ರೆ: ನವೆಂಬರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನ – ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

Prasthutha|

ನವದೆಹಲಿ: ಹಜ್ಜ್ 2022ರ ಯಾತ್ರೆಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೇಂದ್ರ ಹಜ್ಜ್ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಂದು ತಿಳಿಸಿದ್ದಾರೆ.

- Advertisement -

ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಮುಂದಿನ ಹಜ್ಜ್ ಗಾಗಿ ವ್ಯವಸ್ಥೆಗೊಳಿಸಿದೆ. ಈ ಕುರಿತು ಸೌದಿ ಪ್ರಾಧಿಕಾರದೊಂದಿಗೆ ನಿರಂತರ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಹಜ್ಜ್ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಮಾತನಾಡಿದ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮುಂದಿನ ಹಜ್ಜ್ ನ ಅಧಿಕೃತ ಘೋಷಣೆಯನ್ನು ನವೆಂಬರ್ ಮೊದಲ ವಾರದಲ್ಲಿ ಮಾಡಲಾಗುವುದು ಮತ್ತು ಆನ್ ಲೈನ್ ನಲ್ಲಿ ಅರ್ಜಿ ಪ್ರಾರಂಭಿಸಲಾಗುವುದೆಂದು ಅವರು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಡಿಜಿಟಲ್ ಹೆಲ್ತ್ ಕಾರ್ಡ್, ಇ – ಲಗೇಜ್ ಪ್ರಿ ಟ್ಯಾಗಿಂಗ್, ಮಕ್ಕಾ ಮತ್ತು ಮದೀನಾದಲ್ಲಿ ವಸತಿ/ ಸಾರಿಗೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುತ್ತದೆ. ಮಾತ್ರವಲ್ಲ ಉಭಯ ರಾಷ್ಟ್ರಗಳು ಆರೋಗ್ಯ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಹಜ್ಜ್ 2022 ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಹಜ್ಜ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿರುತ್ತದೆ ಎಂದು ನಖ್ವಿ ಒತ್ತಿ ಹೇಳಿದರು. ಇಂಡೋನೇಷ್ಯಾ ನಂತರ ಭಾರತದಿಂದ ಅತ್ಯಧಿಕ ಹಜ್ಜ್ ಯಾತ್ರಿಕರು ಪ್ರಯಾಣ ಬೆಳೆಸುತ್ತಾರೆ.

ಹಜ್ಜ್ ಯಾತ್ರಿಕರಿಗಾಗಿ ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಕೋವಿಡ್ ಮಾರ್ಗಸೂಚಿಗಳು, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ವಿಶೇಷ ತರಬೇತಿಯ ವ್ಯವಸ್ಥೆಗೊಳಿಸಲಾಗಿದೆ ಎಂದು ನಖ್ವಿ ತಿಳಿಸಿದರು.



Join Whatsapp