ಪೋರ್ಟ್ ಆವು ಪ್ರಿನ್ಸ್: ಹೈಟಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,297ಕ್ಕೆ ಏರಿಕೆಯಾಗಿದೆ. ಇನ್ನೂ ಮಣ್ಣಿನಡಿ ಸಿಕ್ಕಿದವರ ಹುಡುಕಾಟ ಮುಂದುವರಿದಿದೆ. ಮನೆಗಳು, ಇಗರ್ಜಿಗಳು, ಶಾಲೆ ಮತ್ತಿತರ ಕಟ್ಟಡಗಳು ನೆಲಸಮ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
5,700 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ. 3,000ದಷ್ಟು ಜನರು ಗಾಯಗೊಂಡಿರುವರು. ನೈರುತ್ಯ ಹೈಟಿ ಬಹು ಬಾಧಿತವಾಗಿದ್ದು, ಲೆಸ್ ಕ್ಯಾಯೆಸ್ ನಗರವು ಎಲ್ಲವನ್ನೂ ಕಳೆದುಕೊಂಡಿದೆ. ಜನರು ಬಿದ್ದ ಕಟ್ಟಡಗಳಡಿಯಿಂದ ಜನರನ್ನು ಮೇಲೆತ್ತಲು ನಡೆಸುತ್ತಿರುವ ಪ್ರಯತ್ನ ಕರುಣಾಜನಕವಾಗಿದೆ.
ಆಂಗ್ಲಿಕನ್ ಚರ್ಚಿನ ಮುಖ್ಯಸ್ಥ ಆರ್ಚ್ ಡೆಕೋನ್ ಅಬೀಡ್ ಲೊಜಾಮಾರು ರಸ್ತೆಯೆಲ್ಲ ನರಳಾಟ ತುಂಬಿದೆ. ಜನರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತ ಆಹಾರ, ಸಹಾಯ, ಔಷಧಿ, ನೀರಿಗಾಗಿ ಗೋಳಿಡುತ್ತಿದ್ದಾರೆ ಎಂದರು.
ಯುಎಸ್ ಎ ಜಿಯಾಲಾಜಿಲ್ ಸರ್ವೆ ಪ್ರಕಾರ ಶನಿವಾರದ ನೆಲನಡುಕವು ಸೆಯಿಂಟ್ ಲೂಯಿಸ್ ಡು ಸೂಡ್ ದ್ವೀಪ ನಗರದಿಂದ 12 ಕಿಮೀ ದೂರದಲ್ಲಿನಡುಕ ಕೇಂದ್ರ ಹೊಂದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 7.2ರಷ್ಟು ಇತ್ತು ಎಂದು ಹೇಳಿದೆ. 125 ಕಿಮೀ ದೂರದ ರಾಜಧಾನಿ ಪೋರ್ಟ್ ಆವು ಪ್ರಿನ್ಸ್ ನಗರದವರಗೂ ಭೂಕಂಪ ತನ್ನ ಹಾನಿಯನ್ನು ರಸ್ತೆಯೆಲ್ಲ ಬೀಳಿಸಿದೆ.
ಪ್ರಧಾನಿ ಏರಿಯಲ್ ಹೆನ್ರಿ ಅವರು ಒಂದು ತಿಂಗಳ ಕಾಲದ ತುರ್ತು ಪರಿಸ್ಥಿತಿ ಘೋಷಿಸಿದ್ದು, ಜನರು ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ. ಇನ್ನಷ್ಟು ನಮ್ಮ ಜನ ಅವಶೇಷಗಳಡಿ ಸಿಲುಕಿದ್ದಾರೆ. ಸ್ಥಳೀಯ ಆಸ್ಪತ್ರೆಗಳೆಲ್ಲ ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ನೆರೆಯ ಡೊಮಿನಿಕನ್ ರಿಪಬ್ಲಿಕ್, ಅಮೆರಿಕ ಮೊದಲಾದ ದೇಶಗಳ ಸಹಾಯಕ್ಕೆ ಮುಂದಾಗಿವೆ. ಮೊದಲು ಔಷಧಿ ಮತ್ತು ಸಿದ್ಧ ಆಹಾರದ ಅಗತ್ಯವಿದೆ. ಕ್ಯೂಬಾ 250 ವೈದ್ಯರ ಸಹಿತ ಮದ್ದು ಕಳುಹಿಸುತ್ತಿದೆ.
ಲೆಸ್ ಕ್ಯಾಯೆಸ್ ನ 1,500 ಮನೆಗಳು, ನಿಪ್ಪೆಸ್ ನಲ್ಲಿ 899 ಮನೆಗಳು, ಗ್ರಾಂಡ್ ಅನ್ದೆಯಲ್ಲಿ 469 ಮನೆಗಳು ಪೂರ್ಣ ನಾಶವಾಗಿದ್ದರೆ, ಲೆಸ್ ಕ್ಯಾಯೆಸ್ ನ 3,000 ಮನೆಗಳು, ನಿಪ್ಪೆಸ್ ನಲ್ಲಿ723 ಮನೆಗಳು, ಗ್ರಾಂಡ್ ಅನ್ದೆಯಲ್ಲಿ1,687 ಮನೆಗಳು ಹಾನಿಗೀಡಾಗಿವೆ.
ಇದರ ನಡುವೆ ಗ್ರೇಸ್ ಉಷ್ಣ ಚಂಡಮಾರುತವು ಹೈಟಿಯತ್ತ ಬರುತ್ತಿದ್ದು ಪರಿಸ್ಥಿತಿಯನ್ನು ಬಾಣಲೆಯಿಂದ ಬೆಂಕಿಗೆ ದೂಡಲಿದೆ. 2010ರಲ್ಲಿ ಹೈಟಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 2,00,000 ಜನರು ಸಾವಿಗೀಡಾಗಿದ್ದರು ಮತ್ತು ಪೂರ್ಣ ಆರ್ಥಿಕತೆ ನಾಶವಾಗಿತ್ತು.