ಮಾರುತಿ 800 ಕಾರನ್ನು ‘ರೋಲ್ಸ್ ರಾಯ್ಸ್’ ಆಗಿ ಪರಿವರ್ತಿಸಿದ ಹದಿಫ್

Prasthutha|

ನವದೆಹಲಿ: ಕೇರಳದ ಯುವಕನೊಬ್ಬ ತನ್ನ ಕೌಶಲ್ಯವನ್ನು ಬಳಸಿಕೊಂಡು ಮಾರುತಿ 800 ಕಾರನ್ನು ಮಿನಿ ರೋಲ್ಸ್ ರಾಯ್ಸ್ ಹೋಲುವಂತೆ ಮರುವಿನ್ಯಾಸಗೊಳಿಸಿದ್ದಾರೆ.
ಸಂಪೂರ್ಣ ಮಾರ್ಪಾಡುಗಳಿಗೆ 45,000 ರೂ. ವೆಚ್ಚವಾಗಿದೆ ಎಂದು ಹದಿಫ್ ಹೇಳಿದರು.

- Advertisement -


ಟ್ರಿಕ್ಸ್ ಟ್ಯೂಬ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಈ ಕಾರಿನ ಬಗೆಗಿನ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಹದೀಪ್, ‘ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದೇನೆ, ಐಷಾರಾಮಿ ಕಾರುಗಳ ಪ್ರತಿಕೃತಿಗಳನ್ನು ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ. ಈಗ ವಿನ್ಯಾಸಗೊಳಿಸಿರುವ ಕಾರಿಗೆ ರೋಲ್ಸ್ ರಾಯ್ಸ್ ತರಹ ಕಾಣುವ ಲೋಗೋವನ್ನು ಸ್ವತಃ ತಾವೇ ರಚಿಸಿರುವುದಾಗಿ ಹೇಳಿದ್ದಾರೆ.


ಯೂಟ್ಯೂಬ್ ನಲ್ಲಿ ಹಂಚಿಕೊಂಡ ವಿಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಾರುತಿ 800 ಕಾರಿನ ಮುಂಭಾಗದಲ್ಲಿ ರೋಲ್ಸ್ ರಾಯ್ಸ್ ನಂತೆ ಕಾಣುವ ಗ್ರಿಲ್ ಮತ್ತು ಹೆಡ್ಲೈಟ್ ಗಳೊಂದಿಗೆ ದಪ್ಪ, ಬೃಹತ್ ವಿನ್ಯಾಸವನ್ನು ಒಳಗೊಂಡಿರುವ ಹೊಸ ಪ್ಯಾನೆಲ್ಅನ್ನು ಅಳವಡಿಸಿದ್ದಾರೆ.

- Advertisement -


ಕಾರಿನ ಮಾರ್ಪಾಡಿಗೆ ಅವರು ಲೋಹದ ಹಾಳೆಗಳು, ವೆಲ್ಡಿಂಗ್ ಕೆಲಸ ಮತ್ತು ಇತರ ಕಾರುಗಳ ಬಿಡಿಭಾಗಗಳನ್ನು ಬಳಸಿದ್ದಾರೆ.



Join Whatsapp