ಜ್ಞಾನವಾಪಿ ಮಸೀದಿ ಹಿಂದಿನಿಂದಲೂ ಸಂಘಪರಿವಾರದ ಹಿಟ್ ಲಿಸ್ಟ್ ನಲ್ಲಿದೆ: ಅಮೆರಿಕನ್ ಮುಸ್ಲಿಮ್ ಕೌನ್ಸಿಲ್

Prasthutha|

ವಾಷಿಂಗ್ಟನ್: ಐತಿಹಾಸಿಕ ಜ್ಞಾನವಾಪಿ ಮಸೀದಿಯು ಈ ಹಿಂದಿನಿಂದಲೂ ಸಂಘಪರಿವಾರದ ಹಿಟ್ ಲಿಸ್ಟ್ ನಲ್ಲಿದೆ ಎಂದು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (IAMC) ಹೇಳಿದೆ.

- Advertisement -

ಐತಿಹಾಸಿಕ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ, ಆದ್ದರಿಂದ ಮಸೀದಿಯ ಒಂದು ಭಾಗವನ್ನು ಮುಚ್ಚುವಂತೆ ಆದೇಶ ನೀಡಿದ ನ್ಯಾಯಾಲಯ ನಡೆಯನ್ನು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದೆ.

ಜ್ಞಾನವಾಪಿ ಮಸೀದಿಯ ಒಂದು ಭಾಗವನ್ನು ತಕ್ಷಣವೇ ಸೀಲ್ ಮಾಡುವಂತೆ ಸ್ಥಳೀಯ ನ್ಯಾಯಾಲಯವು ಅಧಿಕಾರಿಗಳಿಗೆ ಆದೇಶಿಸಿದೆ. ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಬಿಜೆಪಿ, ಆರೆಸ್ಸೆಸ್ ಮತ್ತು ಇತರೆ ಸಂಘಟನೆಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

- Advertisement -

ಸ್ಥಳೀಯ ನ್ಯಾಯಾಲಯದ ನಡೆಯನ್ನು ಮುಸ್ಲಿಮ್ ಸಮುದಾಯ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು. ಇದು ಮತ್ತೊಂದು ಬಾಬರೀ ಘಟನೆಗೆ ಸಿದ್ಧತೆ ಎಂದು ಹಲವು ಮುಖಂಡರು ಆರೋಪಿಸಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದ ಆದೇಶದಿಂದ ಭಾರತೀಯ ಅಮೆರಿಕನ್ನರು ತುಂಬಾ ಹತಾಶಗೊಂಡಿದ್ದು, ಇದು ಬಾಬರಿ ಮಸೀದಿಯ ಪುನರಾವರ್ತನೆಗೆ ದಾರಿ ಮಾಡಿಕೊಡಲಿದೆ ಎಂದು IAMC ನ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್ ತಿಳಿಸಿದ್ದಾರೆ.

ಸಂಘಪರಿವಾರ ಈ ಹಿಂದಿನಿಂದಲೂ ಇತಿಹಾಸವನ್ನು ತಿರುಚುವ ಮೂಲಕ ವಿವಾದವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಲೇ ಬಂದಿದೆ ಮತ್ತು ಮೊಘಲರು ಜ್ಞಾನವಾಪಿ ಮಸೀದಿ, ಅಸಂಖ್ಯಾತ ಇತರ ಮಸೀದಿಗಳನ್ನು ನಿರ್ಮಿಸಲು ದೇವಾಲಯಗಳನ್ನು ನಾಶಪಡಿಸಲಾಗಿದೆ ಎಂಬ ಸುಳ್ಳನ್ನು ಹರಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp