ಲಕ್ನೋ: ಉತ್ತರ ಪ್ರದೇಶ ಜ್ಞಾನವಾಪಿ ಮಸೀದಿ ತೀರ್ಪು ಪ್ರಕಟವಾಗಿದ್ದು, ಮಸೀದಿಯ ಸಮೀಕ್ಷೆಯನ್ನು ಮೇ 17ರ ಒಳಗಡೆ ಪೂರ್ಣಗೊಳಿಸುವಂತೆ ವಾರಣಾಸಿ ಸ್ಥಳೀಯ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ಅಷ್ಟೇ ಅಲ್ಲದೇ ಸಮೀಕ್ಷೆ ನಡೆಸಲಿರುವ ಆಯುಕ್ತರನ್ನು ಬದಲಾವಣೆ ಇಲ್ಲವೇ ಇಲ್ಲ ಹಾಗೂ ಕಮಿಷನರ್ ಜತೆ ಇಬ್ಬರು ಅಧಿಕಾರಿಗಳನ್ನು ನೇಮಿಸುತ್ತೇವೆ ಮತ್ತು ಮಸೀದಿಯ ನೆಲಮಹಡಿಯನ್ನು ತೆರೆಯಬೇಕು ಎಂದು ಆದೇಶಿಸಿದೆ.
ಸಮೀಕ್ಷೆ ನಡೆಸಲು ನೇಮಕಗೊಂಡಿರುವ ನ್ಯಾಯಾಲಯದ ಕಮಿಷನರ್ ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಅಂಜುಮಾನ್ ಇಂತೇಜಾಮಿಯಾ ಮಸ್ಜಿದ್ ಸಲ್ಲಿಸಿದ್ದ ಮನವಿಯನ್ನು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ವಜಾಗೊಳಿಸಿದರು.
ಸಮೀಕ್ಷೆ ಮುಂದುವರಿಸಬೇಕು ಮತ್ತು ಇಬ್ಬರು ವಕೀಲರನ್ನು ಸಮೀಕ್ಷಾ ತಂಡಕ್ಕೆ ಸೇರಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.
ವಾರಣಾಸಿ ನ್ಯಾಯಾಲಯ ಈ ಹಿಂದೆ ಮಸೀದಿ ಪರಿಶೀಲನೆಗೆ ನಿರ್ದೇಶನ ನೀಡಿತ್ತು, ಆದರೆ ಅದನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಏಪ್ರಿಲ್ 21 ರಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.