ಗುರುಪುರ: ಕೈಕಂಬ ಅಂಡರ್ ಪಾಸ್ ಕಾಮಗಾರಿ ವಿರೋಧಿಸಿ ಪಂಚಾಯತ್‌ಗಳಿಗೆ SDPI ಮನವಿ

Prasthutha|

ಗುರುಪುರ: ಕೈಕಂಬ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಚತುಷ್ಪಥ ಫ್ಲೈಓವರ್ ಸೇತುವೆಯನ್ನು ನಿರ್ಮಿಸಬೇಕು. ಈ ಕುರಿತು ಗ್ರಾಮ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸಿ ಗುರುಪುರ, ಕಂದಾವರ, ಪಡುಪೆರಾರ ಮತ್ತು ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

- Advertisement -

ಈ ಸಂದರ್ಭದಲ್ಲಿ ಎಸ್‌ಡಿಪಿಐ ಗುರುಪುರ ಬ್ಲಾಕ್ ಸಮಿತಿ ಅದ್ಯಕ್ಷ ಅಶ್ರಫ್ ಕೈಕಂಬ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್ ಅಡ್ಡೂರು, ಶಾಹೀಕ್ ಅಡ್ಡೂರು, SDPI ಕೈಕಂಬ ಬ್ಲಾಕ್ ಕಾರ್ಯದರ್ಶಿ ಇರ್ಶಾದ್ ಅಡ್ಡೂರು, ಬ್ಲಾಕ್ ಸಮಿತಿ ಸದಸ್ಯ ಇಮ್ತಿಯಾಝ್ ಅಡ್ಡೂರು ಉಪಸ್ಥಿತರಿದ್ದರು

Join Whatsapp