‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ’ಗೆ ಗುರುಪುರ ಗ್ರಾಮ ಪಂಚಾಯತ್‌ ಆಯ್ಕೆ

Prasthutha|

ಮಂಗಳೂರು: 2023ರ ಜಿಲ್ಲಾ ಮಟ್ಟದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿಗೆ ಗುರುಪುರ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

- Advertisement -

ಗ್ರಾಮ ಪಂಚಾಯತ್‌ ಗಳಲ್ಲಿ ಅನುಷ್ಟಾನ ಮಾಡಿರುವ ನೈರ್ಮಲ್ಯ ಘಟಕಾಂಶಗಳು ಹಾಗೂ ಓಡಿಎಫ್ ಪ್ಲಸ್ ಸುಸ್ಥಿರತೆಗೊಳಿಸಲು ಹಮ್ಮಿಕೊಂಡಿರುವ ಚಟುವಟಿಕೆಗಳ ಕುರಿತು ನಡೆಸಿದ ಸಮೀಕ್ಷೆಯಡಿ ಉತ್ತಮ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್ ಎಂದು ಗುರುತಿಸಿ 2023ರ ಜಿಲ್ಲಾ ಮಟ್ಟದ ಪ್ತಶಸ್ತಿಗೆ ಗುರುಪುರ ಗ್ರಾಮ ಪಂಚಾಯತನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಲಶಕ್ತಿ ಮಂತ್ರಾಲಯ, ಸ್ಬಚ್ಛ ಭಾರತ್ ಮಿಷನ್ ಯೋಜನೆಯಡಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023” ಎಂಬ ಸಮೀಕ್ಷೆ ನಡೆಸಿದ್ದು, ಸೆ.11ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Join Whatsapp