ಗುರೂಜಿ ಹಂತಕ ಮಹಾಂತೇಶನಿಗೆ ಬಿಜೆಪಿ ನಂಟು: ನಾಯಕರೊಂದಿಗಿರುವ ಫೋಟೋ ವೈರಲ್

Prasthutha|

ಬೆಂಗಳೂರು; ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರಕ್ಕೆ ಸಂಬಂಧಿಸಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ ಮಾಡಿದ ಹಂತಕ ಮಹಾಂತೇಶ ಬಿಜೆಪಿಯೊಂದಿಗೆ ನಂಟು ಹೊಂದಿರುವುದನ್ನು ಸಾಬೀತುಪಡಿಸುವ ಹಲವು ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

- Advertisement -

ಗುರೂಜಿಯ ಬಹುತೇಕ ವ್ಯವಹಾರಗಳನ್ನು ಹಂತಕ ಮಹಾಂತೇಶ ಶಿರೂರು ನೋಡಿಕೊಳ್ಳುತ್ತಿದ್ದ. ಮಹಾಂತೇಶ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿಕೊಂಡಿದ್ದ ಎಂದು ತಿಳಿದು ಬಂದಿದೆ.

- Advertisement -

ಗೃಹಮಂತ್ರಿ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ , ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್,  ಪ್ರಮೋದ್ ಮುತಾಲಿಕ್ , ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಜೊತೆಗಿನ ಫೋಟೋಗಳು ಈಗ ವೈರಲ್ ಆಗುತ್ತಿದೆ.



Join Whatsapp