ಮಸೀದಿಗೆ ಬೆಂಕಿ ಹಚ್ಚಿ ಧರ್ಮಗುರು ಹತ್ಯೆಗೈದ ದುಷ್ಕರ್ಮಿಗಳು

Prasthutha|

ಗುರುಗ್ರಾಮ್: ಗುರುಗ್ರಾಮ್ ನ ಮಸೀದಿಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ದರ್ಮಗುರುಗಳನ್ನು ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.

- Advertisement -

ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಟರ್ 57ರಲ್ಲಿರುವ ಅಂಜುಮನ್ ಜುಮಾ ಮಸೀದಿಗೂ ಬೆಂಕಿ ಹಚ್ಚಲಾಗಿದ್ದು, ಅಗ್ನಿಶಾಮಕ ನಿಯಂತ್ರಣ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಹತೋಟಿಗೆ ತಂದಿವೆ.

- Advertisement -

ಕೇಂದ್ರ ಸಚಿವ ಹಾಗೂ ಗುರುಗ್ರಾಮ್ ಸಂಸದ ರಾವ್ ಇಂದರ್ ಜಿತ್ ಸಿಂಗ್ ಅವರು ಗುರುಗ್ರಾಮ್ ನ ಮಸೀದಿಯೊಂದರ ಮೇಲೆ ದಾಳಿ ನಡೆಸಲಾಗಿದ್ದು, ಇಮಾಮ್ ಸೇರಿದಂತೆ ಇಬ್ಬರಿಗೆ ಗುಂಡು ಹಾರಿಸಲಾಗಿದೆ NDTVಗೆ ಖಚಿತಪಡಿಸಿದ್ದಾರೆ.

Join Whatsapp