ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಸ್ಥಳೀಯರ ಆಕ್ಷೇಪ: ಅನುಮತಿ ಹಿಂಪಡೆದ ಜಿಲ್ಲಾಡಳಿತ

Prasthutha|

ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ಶುಕ್ರವಾರ ನಮಾಝ್ ಗೆ ಸ್ಥಳೀಯರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 8 ಕಡೆಗಳಲ್ಲಿ ನಮಾಝ್ ಗೆ ನೀಡಿದ ಅನುಮತಿಯನ್ನು ಮಂಗಳವಾರ ಜಿಲ್ಲಾಡಳಿತ ಹಿಂಪಡೆದಿದೆ.

- Advertisement -

ಗುರ್ಗಾಂ ನಿವಾಸಿಗಳು ಮತ್ತು ಆರ್.ಡಬ್ಲ್ಯೂ.ಎ ಆಕ್ಷೇಪ ವ್ಯಕ್ತಪಡಿಸಿದ ನಂತರ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಸ್ಪಷ್ಟಪಡಿಸಿದೆ.

ಜಿಲ್ಲಾಡಳಿತ ನೂತನ ಆದೇಶದನ್ವಯ ಬೆಂಗಾಲಿ ಬಸ್ತಿ, ಡಿ.ಎಲ್.ಎಫ್ -3 ವಿ ಬ್ಲಾಕ್, ಸೂರತ್ ಸಿಟಿ 1, ಖೇರ್ಕಿ ಮಜ್ರಾ ಗ್ರಾಮ, ದ್ವಾರಕಾ ಎಕ್ಸ್ ಪ್ರೆಸ್ ಬಳಿಯ ದೌಲತಾಬಾದ್ ಗ್ರಾಮ, ಸೆಕ್ಟರ್ 68 ರ ರಾಮಘಡ, ಡಿ.ಎಲ್.ಎಫ್ ಬಳಿಯ ಟವರ್ ಮತ್ತು ರಾಮಪುರ ಗ್ರಾಮ ಗ್ರಾಮದ ನಖ್ರೋಲಾ ರಸ್ತೆ ವರೆಗಿನ ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಝ್ ನಿರ್ವಹಣೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಲಿದೆ.

- Advertisement -

ಈ ಮಧ್ಯೆ ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಮತ್ತು ನಿಗದಿಪಡಿಸಿದ ಸ್ಥಳದಲ್ಲಿ ನಮಾಝ್ ನೀಡಬಹುದು. ಸ್ಥಳೀಯರ ಆಕ್ಷೇಪಣೆ ವ್ಯಕ್ತಪಡಿಸಿದರೆ ಅಲ್ಲಿ ನಮಾಝ್ ನಿರ್ವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಕುರಿತು ಚರ್ಚೆ ನಡೆಸಲು ಮತ್ತು ನಮಾಝ್ ಮಾಡಲು ಸ್ಥಳಗಳನ್ನು ಗುರುತಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಹಾಯಕ ಪೊಲೀಸರು ಮತ್ತು ಧಾರ್ಮಿಕ ಸಂಘಟನೆ, ನಾಗರಿಕ ಸಾಮಾಜಿಕ ಸಂಘಟನೆಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಡೆಪ್ಯುಟಿ ಕಮಿಷನರ್ ಯಶ್ ಗರ್ಗ್ ಅವರು ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.



Join Whatsapp