ಗುರ್ಗಾಂವ್ ನಮಾಝ್ ಗೆ ಅಡ್ಡಿ: ಮುಸ್ಲಿಮ್ ಮಂಚ್ ಮಾಡಿಕೊಂಡ ಒಪ್ಪಂದ ತಿರಸ್ಕರಿಸಿದ ಮುಸ್ಲಿಮ್ ಕೌನ್ಸಿಲ್

Prasthutha|

ಗುರ್ಗಾಂವ್ : ಗುರ್ಗಾಂವ್ ನ ನಿಗದಿತ 20 ಸ್ಥಳಗಳಲ್ಲಿ ನಮಾಝ್ ಮಾಡುವುದಿಲ್ಲ ಎಂದು ಬಲಪಂಥೀಯ ಸಂಘಟನೆ ಮತ್ತು ಆಡಳಿತದೊಂದಿಗೆ ನಡೆದ ಸಭೆಯಲ್ಲಿ ಇಮಾಮ್ ಸಂಘಟನ್ ಎಂಬ ಸಂಘಟನೆ ಮಾಡಿಕೊಂಡ ಒಪ್ಪಂದ ಮೋಸದಿಂದ ಕೂಡಿದ್ದು, ಅದನ್ನು ತಿರಸ್ಕರಿಸುವುದಾಗಿ ಗುರ್ವಾಂವ್ ಮುಸ್ಲಿಮ್ ಕೌನ್ಸಿಲ್ ತಿಳಿಸಿದೆ.

- Advertisement -


ಸಭೆ ನಡೆಸಿದ ಒಂದು ದಿನದ ನಂತರ, ಗುರ್ಗಾಂವ್ ಮುಸ್ಲಿಂ ಕೌನ್ಸಿಲ್ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಇಮಾಮ್ ಸಂಘಟನೆ ಮಾಡಿಕೊಂಡ ಪ್ರಸ್ತಾಪ “ಮೋಸ”ದಿಂದ ಕೂಡಿದ್ದು, ಅದನ್ನು ತಿರಸ್ಕರಿಸುವುದಾಗಿ ಹೇಳಿದೆ. ಮುಕ್ತವಾಗಿ ನಮಾಝ್ ನಿರ್ವಹಿಸಲು ಅನುಕೂಲವಾಗುವಂತೆ ಸೌಹಾರ್ದಯುತ ಪರಿಹಾರಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಅದು ಕೌನ್ಸಿಲ್ ಒತ್ತಾಯಿಸಿದೆ.


2018 ರಲ್ಲಿ ನೀಡಿದ ಅನುಮತಿಯಂತೆ 37 ಸ್ಥಳಗಳಲ್ಲಿ ಮುಸ್ಲಿಮರು ಜುಮಾ ನಮಾಜ್ ನಿರ್ವಹಿಸಲಿದ್ದಾರೆ ಎಂದು ಕೌನ್ಸಿಲ್ ಮನವಿ ಪತ್ರದಲ್ಲಿ ತಿಳಿಸಿದೆ. ಜಿಲ್ಲಾಡಳಿತ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಬೇಕು, ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದೆ. ನಿಯೋಗದಲ್ಲಿ ಗುರ್ವಾಂವ್ ಮುಸ್ಲಿಂ ಕೌನ್ಸಿಲ್ ನ ಸದಸ್ಯರು ಮತ್ತು ಇತರ ಹಲವಾರು ಇಮಾಮ್ ಗಳು ಇದ್ದರು. ಅವರೊಂದಿಗೆ ಗುರ್ವಾಂವ್ ನ ಜಮಿಯತ್-ಉಲಾಮಾ-ಇ-ಹಿಂದ್ ಅಧ್ಯಕ್ಷ ಮುಫ್ತಿ ಮುಹಮ್ಮದ್ ಸಲೀಮ್ ಖಾಸ್ಮಿ ಮತ್ತು ಮುಸ್ಲಿಂ ಏಕ್ತಾ ಮಂಚ್ ಅಧ್ಯಕ್ಷ ಹಜಿ ಶಹಜಾದ್ ಖಾನ್ ಕೂಡ ಇದ್ದರು.

- Advertisement -


“ನಿನ್ನೆ [ಸೋಮವಾರ] ನಡೆದ ಸಭೆಯಲ್ಲಿ ಭಾಗವಾಗಿದ್ದವರು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಅವರು ಸಮುದಾಯದ ನಿಜವಾದ ಪ್ರತಿನಿಧಿಗಳಲ್ಲ. ಮಂಗಳವಾರ ಎಂದು ಗುರ್ಗಾಂವ್ ಮುಸ್ಲಿಂ ಕೌನ್ಸಿಲ್ ಸದಸ್ಯ ಅಲ್ತಾಫ್ ಅಹ್ಮದ್ ಹೇಳಿದ್ದಾರೆ. ಇಮಾಮ್ ಗಳು ಮತ್ತು ಸನ್ಯಾಸಿ ಹಿಂದೂ ಸಂಘರ್ಷ ಸಮಿತಿ ನಾಯಕರ ನಡುವಿನ ಸಭೆ “ಸಂಪೂರ್ಣವಾಗಿ ಮೋಸ ಮತ್ತು ಕಾನೂನುಬಾಹಿರ” ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.


ಇದನ್ನು “ರಹಸ್ಯ ಮತ್ತು ಅನುಮಾನಾಸ್ಪದ ರೀತಿಯಲ್ಲಿ” ನಡೆಸಲಾಗಿದೆ ಎಂದು ಕೌನ್ಸಿಲ್ ತಿಳಿಸಿದೆ.
“ಮುಸ್ಲಿಮರು ಸಾಮಾನ್ಯವಾಗಿ ಮುಸ್ಲಿಂ ರಾಷ್ಟ್ರೀಯ ಮಂಚ್ ಅಥವಾ ಬೆರಳೆಣಿಕೆಯಷ್ಟು ಮೌಲ್ವಿಗಳನ್ನು ನಂಬುವುದಿಲ್ಲ. ಅವರು ಗುರ್ಗಾಂವ್ ನ ನಿಜವಾದ ಮುಸ್ಲಿಂ ನಾಗರಿಕರ ಧ್ವನಿಯಲ್ಲ ಎಂದು ಗುರ್ಗಾಂವ್ ಮುಸ್ಲಿಂ ಕೌನ್ಸಿಲ್ ತಿಳಿಸಿದೆ.



Join Whatsapp