ಗುಜರಾತ್ ಹತ್ಯಾಕಾಂಡ| ಇಂಗ್ಲೆಂಡ್‌ ಸರ್ಕಾರದ ತನಿಖಾ ತಂಡದ ವರದಿಯಲ್ಲೇನಿದೆ?

Prasthutha|

►ಮುಸ್ಲಿಮರ ನಿಖರ ಮಾಹಿತಿ ಇರುವ ಪಟ್ಟಿಯನ್ನು ಮೊದಲೇ ತಯಾರಿಸಿಕೊಂಡಿದ್ದ ಗಲಭೆಕೋರರು!

- Advertisement -

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ.

2002ರ ಗುಜರಾತ್ ಹತ್ಯಾಕಾಂಡ ಕುರಿತ ಇಂಗ್ಲೆಂಡ್‌ ಸರ್ಕಾರದ ತನಿಖಾ ತಂಡದ ವರದಿಯನ್ನು ಆಧರಿಸಿ ಗುಜರಾತ್ ನರಮೇಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಕುರಿತು ಬಿಬಿಸಿ ಸುದ್ದಿ ಸಂಸ್ಥೆ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿತ್ತು.

- Advertisement -

2002ರ ಗೋಧ್ರಾ ಹತ್ಯಾಕಾಂಡದಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ತಿನ ಪಾತ್ರವೇನು? ಎಂಬುದರ ಕುರಿತು ಬ್ರಿಟನ್‌ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಕಾರವಾನ್‌’ ಮ್ಯಾಗ್‌ಜೀನ್‌ ಬಹಿರಂಗಪಡಿಸಿದೆ.

2002ರ ಹಿಂಸಾಚಾರಕ್ಕೆ ತಿಂಗಳುಗಳ ಹಿಂದೆಯೇ ವಿಶ್ವ ಹಿಂದೂ ಪರಿಷತ್ ಗಲಭೆಯ ಯೋಜನೆ ರೂಪಿಸಿತ್ತು. 2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿರುವುದು ಕೇವಲ ನೆಪ ಮಾತ್ರ. ಒಂದು ವೇಳೆ ಈ ಕೃತ್ಯ ನಡೆಯದೇ ಇದ್ದರೂ, ಮತ್ಯಾವುದೋ ಕಾರಣ ಹುಡುಕಿಕೊಂಡು ಹಿಂಸಾಚಾರ ನಡೆಸಲು ವಿಶ್ವ ಹಿಂದೂ ಪರಿಷತ್ ಸಜ್ಜಾಗಿತ್ತು ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಬ್ರಿಟನ್ ತನಿಖಾ ತಂಡವು ಬಿಡುಗಡೆಗೊಳಿಸಿದೆ.

ಗಲಭೆಕೋರರು ಮುಸ್ಲಿಂ ಮನೆಗಳ ಸಂಖ್ಯೆ ಮತ್ತು ಅಂಗಡಿಗಳ ಸಂಖ್ಯೆಯ ಪಟ್ಟಿಯನ್ನು ಮೊದಲೇ ತಯಾರಿಸಿಕೊಂಡಿದ್ದರು. ಮುಸಲ್ಮಾನರ ವ್ಯಾಪಾರ ಮುಂಗಟ್ಟುಗಳು ಸೇರಿದಂತೆ ನಿಖರ ಮಾಹಿತಿಯಿರುವ ಪಟ್ಟಿ ಮತ್ತು ವಿವರಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹಿಂಸಾಚಾರಕ್ಕೆ ನೇರ ಹೊಣೆಯಾಗಿದ್ದು, ಗುಜರಾತ್ ರಾಜ್ಯ ಸರ್ಕಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿ ತನಿಖಾ ವರದಿಯು ಸಾಕ್ಷ್ಯಗಳನ್ನು ಮುಂದಿಟ್ಟಿದೆ.

“ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ವಿಎಚ್‌ಪಿ ಮತ್ತು ಅದರ ಮಿತ್ರಪಕ್ಷಗಳು ಗುಜರಾತಿನಲ್ಲಿ ಅಷ್ಟೊಂದು ದೊಡ್ಡ ಹಾನಿ ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರೇ ಹಿಂಸಾಚಾರಕ್ಕೆ ನೇರ ಹೊಣೆ. ಕೇವಲ ರಾಜಕೀಯದ ಲಾಭಕ್ಕಾಗಿ ಗಲಭೆ ಎಬ್ಬಿಸಲಾಗಿದೆ. 1995ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂ ರಾಷ್ಟ್ರೀಯವಾದಿ ಅಜೆಂಡಕ್ಕಾಗಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯು ವಿಎಚ್‌ಪಿಯ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದೆ. ವಿಶ್ವಾಸಾರ್ಹ ಮಾನವ ಹಕ್ಕುಗಳ ಸಂಘಟನೆಗಳಿಂದ ಪಡೆದ ಮಾಹಿತಿಯ ಪ್ರಕಾರ ಅಂದಾಜು ಸಾವಿನ ಸಂಖ್ಯೆ 2,000. ಹಿಂಸಾಚಾರದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರ ಎಸಗಲಾಗಿದೆ. ಕೆಲವೊಮ್ಮೆ ಗುಜರಾತಿನ ಪೊಲೀಸರು ಸಹ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ರಾಜ್ಯ ಸರ್ಕಾರದ ಒತ್ತಡದಿಂದ ಪೊಲೀಸ್‌ ಪ್ರಕ್ರಿಯೆ ನಿಷ್ಕ್ರಿಯವಾಗಿತ್ತು” ಎಂದು ಬ್ರಿಟನ್ ತನಿಖಾ ವರದಿ ಹೇಳಿದೆ.

ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಅತ್ಯಾಚಾರ ಎಸಗಲಾಗಿದೆ. ಗೋಧ್ರಾ ಹಿಂಸಾಚಾರದ ಪರಿಣಾಮ ನಿರಾಶ್ರಿತರ ಬಿಡಾರದಲ್ಲಿ ಆಶ್ರಯ ಪಡೆದವರ ಸಂಖ್ಯೆ 1,38,000. ಹಿಂದೂ ಮತ್ತು ಮುಸ್ಲಿಂ ಪ್ರದೇಶಗಳಲ್ಲಿ ಮುಸ್ಲಿಮರ ವ್ಯವಹಾರಗಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ.

ಹಿಂದೂ ಪ್ರದೇಶಗಳಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಹುನ್ನಾರದಿಂದ ಹಿಂಸಾಚಾರ ಭುಗಿಲೆದ್ದಿದೆ. ರಾಜಕೀಯ ಪ್ರೇರಿತವಾದ ಹಿಂಸಾಚಾರವನ್ನು ಮೊದಲೇ ಯೋಜಿಸಲಾಗಿತ್ತು. ಮೋದಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದುದರಿಂದ ರಾಜಿ ಸಂಧಾನ ಅಸಾಧ್ಯವಾಗಿತ್ತು.

ಬ್ರಿಟನ್ ತನಿಖಾ ತಂಡವು ಹಿಂಸಾಚಾರದ ಪರಿಣಾಮ ತಿಳಿದುಕೊಳ್ಳಲು 2022ರ ಏಪ್ರಿಲ್ 8 ರಿಂದ 10 ರವರೆಗೂ ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಿತು. ಮಾನವ ಹಕ್ಕುಗಳ ಹೋರಾಟಗಾರರು, ಎರಡೂ ಸಮುದಾಯಗಳ ನಾಯಕರು, ಹಿರಿಯ ಪೊಲೀಸ್‌ ಅಧಿಕಾರಿಗಳು, ಪೊಲೀಸರು, ರಾಜಕಾರಣಿಗಳು ಹಾಗೂ ಪತ್ರಕರ್ತರನ್ನು ತನಿಖಾ ತಂಡ ಭೇಟಿ ಮಾಡಿದೆ. ಆದರೆ, ರಾಜ್ಯ ಸರ್ಕಾರದ ಯಾವೊಬ್ಬ ಪ್ರತಿನಿಧಿಯನ್ನೂ ಭೇಟಿ ಮಾಡಿಲ್ಲ.

Join Whatsapp