ಗುಜರಾತ್| ಯುವತಿ ಹತ್ಯೆ ಪ್ರಕರಣ; 70 ದಿನಗಳಲ್ಲೇ ಅಪರಾಧಿಗೆ ಮರಣದಂಡನೆ

Prasthutha|

ಸೂರತ್:  ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕುಟುಂಬ ಸದಸ್ಯರೆದುರೇ ಕೊಲೆಗೈದಿದ್ದ ಆರೋಪಿಗೆ ಸೂರತ್ ನ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

- Advertisement -

ಪ್ರೇಮ ನಿರಾಕರಿಸಿದಳೆಂಬ ಕಾರಣದಿಂದ ಕಳೆದ ಫೆಬ್ರವರಿ 16 ರಂದು 21 ವರ್ಷದ ಕಾಲೇಜು ವಿದ್ಯಾರ್ಥಿನಿ ಗ್ರೀಷ್ಮಾ ವೆಕಾರಿಯಾಳನ್ನು ಫೆನಿಲ್ ಗೊಯಾನ್ ಎಂಬ ಹುಚ್ಚು ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ  ಕತ್ತುಸೀಳಿ ಕೊಲೆಗೈದಿದ್ದ. ರಕ್ಷಿಸಲು ಬಂದ ಆಕೆಯ ಅಣ್ಣ ಮತ್ತು ಚಿಕ್ಕಪ್ಪನಿಗೂ  ಇರಿದು, ನಂತರ ಸ್ವಯಂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

ಇದೊಂದು ಅಪರೂಪದ ಪ್ರಕರಣ ಎಂದು ಪರಿಗಣಿಸಿರುವ ನ್ಯಾಯಾಲಯ, ಘಟನೆ ನಡೆದ ಕೇವಲ 70 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ಘೋಷಿಸಿ ತೀರ್ಪು ನೀಡಿದೆ.

- Advertisement -

ತೀರ್ಪಿನ  ವೇಳೆ, ನಿರ್ಭಯಾ ಪ್ರಕರಣವನ್ನು ಉಲ್ಲೇಖೀಸಿದ ಸೂರತ್ ನ  ಪ್ರಿನ್ಸಿಪಲ್ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಧೀಶ ಕೆ.ಕೆ.ವ್ಯಾಸ್,  ಮಹಿಳೆಯರ ವಿರುದ್ಧದ ಇಂತಹ  ಘೋರ ಅಪರಾಧಗಳನ್ನು ತಡೆಯಬೇಕೆಂದರೆ ಕಠಿಣ  ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಒಂದೇ ವಾರದಲ್ಲಿ 2,500 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು, 25 ಪ್ರತ್ಯಕ್ಷ ಸಾಕ್ಷ್ಯಗಳು, 120 ದಾಖಲೆಗಳನ್ನು ಪುರಾವೆಯಾಗಿ ಒದಗಿಸಿದ್ದರು.



Join Whatsapp