ಮೋದಿ ಕಾರ್ಯಕ್ರಮಕ್ಕೆ ಸೇರದ ಜನಸ್ತೋಮ: ಗುಜರಾತಿನ ವೀಡಿಯೋ ವೈರಲ್ ಮಾಡಿ ಮಂಗಳೂರಿನದ್ದು ಎಂದ ಬಿಜೆಪಿಗರು

Prasthutha|

ಮಂಗಳೂರು: ನಗರದ ಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಜನಸ್ತೋಮ ಸೇರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು, ಮುಜುಗರಕ್ಕೀಡಾಗಿದೆ.

- Advertisement -

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಗುಜರಾತಿನ ಕಚ್ ನಲ್ಲಿ ನಡೆದ  ಕಾರ್ಯಕ್ರಮದ ವೀಡಿಯೋ ಇಂದು ವೈರಲ್ ಮಾಡುತ್ತಿರುವ ಬಿಜೆಪಿ ಬೆಂಬಲಿಗರು, ಮೋದಿ ಮಂಗಳೂರು ಭೇಟಿ ಸಂದರ್ಭದಲ್ಲಿ ಸೇರಿದ ಜನಸಾಗರ  ಎಂದು ತಲೆಬರಹದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ.

ಬಿಜೆಪಿಗರ ಶಕ್ತಿಪ್ರದರ್ಶನಕ್ಕೆ ಬೇಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಜನದಟ್ಟಣೆ ಇರದ ಹಿನ್ನೆಲೆಯಲ್ಲಿ ಮೋದಿ ಅಲೆಯೆಂದು ಬಿಂಬಿಸಲು ಹಳೇ ವೀಡಿಯೋವನ್ನು ಹಂಚುತ್ತಿರುವ ಬಿಜೆಪಿ ಬೆಂಬಲಿಗರ ನಡೆ ಸಾಮಾಜಿಕ ವಲಯಗಳಲ್ಲಿ ಅಪಹಾಸ್ಯಕ್ಕೀಡಾಗಿದೆ.

Join Whatsapp