ವಾಪಿ: ಗುಜರಾತ್ನ ವಲ್ಸಾದ್ ಜಿಲ್ಲೆಯ ವಾಪಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು(ಡಿಆರ್ ಐ) ₹180 ಕೋಟಿ ಮೌಲ್ಯದ ಮೆಫೆಡ್ರೋನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.
ಸಂಸ್ಥೆಯ ಮಾಲೀಕ ರಾಜು ಸಿಂಗ್, ಅಕೌಂಟೆಂಟ್ ಕೆಯೂರ್ ಪಟೇಲ್ ಮತ್ತು ಕೆಲಸಗಾರ ಕುಂದನ್ ಯಾದವ್ ಅವರನ್ನು ಬಂಧಿಸಲಾಗಿದೆ.
ವಾಪಿಯ ಗುಜರಾತ್ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ(ಜಿಐಡಿಸಿ) ಪ್ರೈಮ್ ಪಾಲಿಮರ್ ಇಂಡಸ್ಟ್ರೀಸ್ನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎಂಬ ಸುಳಿವು ಆಧರಿಸಿ, ಡಿಆರ್ಐ ದಾಳಿ ನಡೆಸಿ 121.75 ಕೆ.ಜಿ ದ್ರವರೂಪದ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ.