ಗುಜರಾತ್: ರಾಹುಲ್ ಗಾಂಧಿ- ಹಾರ್ದಿಕ್ ಪಟೇಲ್ ಭೇಟಿ ಸಾಧ್ಯತೆ

Prasthutha|

ಅಹಮದಾಬಾದ್: ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಅತೃಪ್ತ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗುವ ಸಾಧ್ಯತೆಯಿದೆ.

- Advertisement -


ಗುಜರಾತ್ ನ ಪ್ರಬಲ ಪಾಟೀದಾರ್ ಸಮುದಾಯದ ನಾಯಕ ಮತ್ತು ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವ ಹಾರ್ದಿಕ್ ಪಟೇಲ್ ಇತ್ತೀಚೆಗೆ ಆಡಳಿತಾರೂಢ ಬಿಜೆಪಿಯೊಂದಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಊಹಾಪೋಹ ಕೇಳಿಬಂದಿತ್ತು. ಈ ನಡುವೆ ತಮ್ಮ ಟ್ವಿಟರ್ ಬಯೋದಿಂದ “ಕಾಂಗ್ರೆಸ್” ಮತ್ತು ಪಕ್ಷದ ಚಿಹ್ನೆಯನ್ನು ಅವರು ಕೈಬಿಟ್ಟಿದ್ದರು.


2019 ರಲ್ಲಿ ಕಾಂಗ್ರೆಸ್ ಸೇರಿದ 28 ವರ್ಷದ ಪಾಟೀಲ್, ಗುಜರಾತ್ ನಲ್ಲಿ ಕಾಂಗ್ರೆಸ್ ಮತ್ತು ಅದರ ಉನ್ನತ ನಾಯಕರು ತಮ್ಮನ್ನು “ನಿರ್ಲಕ್ಷಿಸಿದ್ದಾರೆ” ಎಂದು ದೂರುತ್ತಿದ್ದಾರೆ. ಗುಜರಾತ್ ಚುನಾವಣೆಗೆ ಒಂದು ವರ್ಷ ಇರುವುದರಿಂದ ಇಂದು ಹಾರ್ದಿಕ್ ಪಟೇಲ್ ನನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.



Join Whatsapp