ಅಹ್ಮದಾಬಾದ್: ನವರಾತ್ರಿ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮುಸ್ಲಿಂ ಪುರುಷರನ್ನು ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಲಾಠಿಯಿಂದ ಕ್ರೂರವಾಗಿ ಥಳಿಸಿದ್ದು, ಈ ವೀಡಿಯೋ ಸಾಮಾಜಿಕ ವಲಯಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಅಮಾನವೀಯ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ ಮತ್ತು ಗುಜರಾತ್ ಪೊಲೀಸ್ ಇಲಾಖೆ ಪೊಲೀಸರ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದೆ.
India 2022:
— Arfa Khanum Sherwani (@khanumarfa) October 5, 2022
This is Prime Minister Narendra Modi’s home state Gujarat.
The police is beating up in full public view Muslim men who were accused of throwing stones at a Garba event.
The crowd witnessing the flogging is cheering the police action and chanting ‘Bharat Mata Ki Jai’. pic.twitter.com/872qej1g6E
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಟ್ವಿಟರ್ ಮೂಲಕ ಈ ವೀಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕರು, ಆರೋಪಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಯಾವುದೇ ತನಿಖೆಯಿಲ್ಲದೆ ಸಾರ್ವಜನಿಕವಾಗಿ ಕ್ರೂರವಾಗಿ ಥಳಿಸುವುದು ಪೊಲೀಸರ ಅನಾಗರಿಕತೆಯ ಲಕ್ಷಣ ಎಂದ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಜಿಪಿ ಆಶಿಸ್ ಭಾಟಿಯಾ , ವೀಡಿಯೋವನ್ನು ಪರಿಗಣಿಸಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
Under which law does this happen? @IPS_Association ? https://t.co/IWmJ430R97
— Sucheta Dalal (@suchetadalal) October 4, 2022
ಮಸೀದಿಯ ಗೋಡೆಗೆ ಹೊಂದಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಕೆಲವು ಮುಸ್ಲಿಂ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ 10 ಮಂದಿಯನ್ನು ಸೋಮವಾರ ರಾತ್ರಿಯೇ ಬಂಧಿಸಲಾಗಿತ್ತು. ಮರುದಿನ ಬೆಳಿಗ್ಗೆ ಬಂಧಿತರಲ್ಲಿ ಐವರನ್ನು ಕರೆತಂದು ಪೊಲೀಸರು ಸಾರ್ವಜನಿಕವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಒಬ್ಬರಾದ ಬಳಿಕ ಒಬ್ಬರನ್ನು ಪೊಲೀಸರು ಥಳಿಸಿದ್ದು ನೆರೆದವರು ಸಂಭ್ರಮಿಸುವುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.