ಗಾಂಧಿನಗರ: ಗುಜರಾತ್ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ₹500 ಕೋಟಿಗೂ ಅಧಿಕ ಮೌಲ್ಯದ 52 ಕೆಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಮಾಹಿತಿಯ ಮೇರೆಗೆ ಮೇ 24ರಿಂದ 26ರ ವರೆಗೆ ಡಿಆರ್ಐ ಅಧಿಕಾರಿಗಳು ನಡೆಸಿದ ‘ಆಪರೇಷನ್ ನಮ್ ಕೀನ್ ‘ ಎಂಬ ಕಾರ್ಯಾಚರಣೆಯ ಸಂದರ್ಭದಲ್ಲಿ ಉಪ್ಪಿನ ಪ್ಯಾಕೆಟ್ನಲ್ಲಿ ಕೊಕೇನ್ ಕಳ್ಳಸಾಗಣೆ ನಡೆಸಿರುವುದು ಪತ್ತೆಯಾಗಿದೆ.
ಇರಾನ್ನಿಂದ ಆಮದು ಮಾಡಿಕೊಂಡಿದ್ದ ಉಪ್ಪಿನ ಪ್ಯಾಕೆಟ್ನಲ್ಲಿ ಕೊಕೇನ್ ಅನ್ನು ಅಡಗಿಸಿ ಇರಿಸಲಾಗಿತ್ತು. 2021 ಮತ್ತು 2022ನೇ ಸಾಲಿನಲ್ಲಿ ಈವರೆಗೆ 321 ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ ₹3,200 ಕೋಟಿ ಆಗಿದೆ ಎಂದು ಡಿಆರ್ಐ ಅಧಿಕಾರಿಗಳು ಹೇಳಿದ್ದಾರೆ.