ಮುಂಬೈ ನಲ್ಲಿ ₹ 4 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ: ಗುಜರಾತ್ ನ ವ್ಯಕ್ತಿ ಬಂಧನ

Prasthutha|

ಮುಂಬೈ: ಇಲ್ಲಿನ ವಿಮಾನ ನಿಲ್ದಾಣದ ಬಳಿಯ ಕಾರ್ಗೋ ಕಾಂಪ್ಲೆಕ್ಸ್ ನಲ್ಲಿ 4 ಕೋಟಿ ರೂಪಾಯಿ ಮೌಲ್ಯದ 700 ಗ್ರಾಂ ಹೆರಾಯಿನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಗುರುವಾರ ಗುಜರಾತ್‌ ಮೂಲದ ವ್ಯಕ್ತಿಯನ್ನು ಬಂಧಿಸಿದೆ.

- Advertisement -

ಈ ಪಾರ್ಸೆಲ್ ಗುಜರಾತ್ ನ ವಡೋದರಾ ನಿವಾಸಿ ಕೃಷ್ಣ ಮುರಾರಿ ಪ್ರಸಾದ್ ಹೆಸರಿನಲ್ಲಿ ಇತ್ತು. ಈ ನಿಟ್ಟಿನಲ್ಲಿ ಪ್ರಸಾದ್ ಗೆ ಸಮನ್ಸ್ ನೀಡಿದ್ದು, ಬಂಧನ ಮಾಡಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋದ ಅಧಿಕಾರಿ ತಿಳಿಸಿದ್ದಾರೆ.

ಮಾಹಿತಿ ಆಧಾರದ ಮೇಲೆ ಕಾಂಪ್ಲೆಕ್ಸ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ಯಾಕೇಟ್ ನಲ್ಲಿ 700 ಗ್ರಾಂಗಳಷ್ಟು ಬಿಳಿ ಪೌಡರ್ ಇದ್ದಿರುವುದು ಪತ್ತೆಯಾಗಿತ್ತು. ಇದು ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಎಂದು ವರದಿ ಹೇಳಿದೆ.



Join Whatsapp