ಗುಜರಾತಿನಲ್ಲಿ ಮುಂದುವರಿದ ಗುಂಪು ಹಿಂಸೆ । ಹಿಂದುತ್ವ ಗುಂಪಿನಿಂದ ಮುಸ್ಲಿಮ್ ಡೆಲಿವರಿ ಯುವಕನಿಗೆ ಗಂಭೀರ ಹಲ್ಲೆ

Prasthutha|

ಅಹಮದಾಬಾದ್: ಗುಜರಾತಿನಲ್ಲಿ ಮುಸ್ಲಿಮ್ ವಿರೋಧಿ ಹಿಂಸಾ ಪ್ರವೃತ್ತಿ ಮುಂದುವರಿದಿದ್ದು, ಡೆಲಿವರಿ ಯುವಕನಿಗೆ ಹಿಂದುತ್ವವಾದಿಗಳು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಅಹಮದಾಬಾದ್ ನ ವಸತಿ ಸಂಕೀರ್ಣದಿಂದ ವರದಿಯಾಗಿದೆ.

- Advertisement -

21 ವರ್ಷದ ಡೆಲಿವರಿ ಯುವಕ ಅನಸ್ ಮುಹಮ್ಮದ್ ಎಂಬಾತ ದೆಹಲಿಯ ಕೊರಿಯರ್ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕಂಪೆನಿಯ ಸೂಪರ್ ವೈಸರ್ ಜೊತೆ ತೆರೆಳುತ್ತಿದ್ದಾಗ ಮುಸ್ಲಿಮ್ ಎಂಬ ನೆಲೆಯಲ್ಲಿ ಆತನಿಗೆ ಹಲ್ಲೆ ನಡೆಸಲಾಗಿದೆ. ತಲೆಗೂದಲನ್ನು ಎಳೆದಾಡಿ ನನ್ನ ಕೆನ್ನೆ, ಕುತ್ತಿಗೆ ಮತ್ತು ಎದೆಗೆ ಹಲ್ಲೆ ನಡೆಸಲಾಗಿದೆ ಎಂದು ಯುವಕ ದೂರಿದ್ದಾನೆ.

ಈ ಮಧ್ಯೆ ಹಲ್ಲೆಗೆ ಸಂಬಂಧಿಸಿದಂತೆ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ಅನಸ್ , ವಸತಿ ಸಂಕೀರ್ಣದ ದಾಖಲೆಯಲ್ಲಿ ಹೆಸರನ್ನು ನಮೂದಿಸದ ನೆಪದಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವಾರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಅಮರವಾಡಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಅನಸ್ ನೀಡಿದ ಲಿಖಿತ ದೂರಿನನ್ವಯ ನಾಲ್ವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಆರೋಪಿಗಳಾದ ಅಂಶುಲ್, ಸುಶೀಲ್, ನರನ್ ಶಂಕರ್ ದಾಸ್ ಪಟೇಲ್, ಅಶೋಕ್ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 323, 294 (ಬಿ), 114 (ಎನ್) 135 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp