ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ: ಬೃಹತ್ ಮೊತ್ತದ ಅಕ್ರಮ ವಸ್ತುಗಳು ಪೊಲೀಸ್ ವಶ

Prasthutha|

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ರಾಜ್ಯಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಬರೊಬ್ಬರಿ 850 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

- Advertisement -


ಗುಜರಾತ್ ನಲ್ಲಿ 801.85 ಕೋಟಿ ಮತ್ತು ಹಿಮಾಚಲದಲ್ಲಿ 57.24 ಕೋಟಿ ರೂ.ಯಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2017ರ ಚುನಾವಣೆಗೆ ಹೋಲಿಸಿದರೆ ಗುಜರಾತ್‌ನಲ್ಲಿ ಇದು ಎರಡು ಸಾವಿರ ಪಟ್ಟು ಅಧಿಕವಾಗಿದೆ. ಅದೇ ರೀತಿಯಾಗಿ ಹಿಮಾಚಲ ಪ್ರದೇಶದಲ್ಲೂ ಐನೂರು ಪಟ್ಟು ಅಧಿಕ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.


ಗುಜರಾತ್‌ನ ಗಡಿ ಜಿಲ್ಲೆ ಕಚ್ನ ಮುಂದ್ರಾ ಬಂದರಿನಲ್ಲಿ ಡಿಆರ್‌ಐ 160 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಡೋದರಾದಲ್ಲಿ 478 ಕೋಟಿ ರೂ. ಮೌಲ್ಯದ ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
2017ರಲ್ಲಿ ಗುಜರಾತ್ ಮತ್ತು ಹಿಮಾಚಲದಲ್ಲಿ ಕ್ರಮವಾಗಿ 27.21 ಕೋಟಿ ಮತ್ತು 9.03 ಕೋಟಿ ರೂ.ಯಷ್ಟು ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿತ್ತು.

- Advertisement -


ಈ ತಿಂಗಳ 1-5ರವರೆಗೆ ನಡೆದ ಚುನಾವಣೆ ವೇಳೆ ಬಿಜೆಪಿ ಗುಜರಾತ್ ನ ಜಿಲ್ಲಾಧ್ಯಕ್ಷನೋರ್ವ ಮದ್ಯದ ಬಾಕ್ಸ್ ಗಳನ್ನು ಕಾರಿನಲ್ಲಿ ಸಾಗಾಟ ಮಾಡುವಾಗ ಜೊತೆ ಸಿಕ್ಕಿಬಿದ್ದಿದ್ದ ವೀಡಿಯೋ ವೈರಲ್ ಆಗಿತ್ತು.



Join Whatsapp