ಗುಜರಾತ್‌: ಚುನಾವಣೆಗೂ ಮುನ್ನ 900 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರ

Prasthutha|

ಗುಜರಾತ್: ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್ ಸರ್ಕಾರವು 900ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಿವಿಧ ಶ್ರೇಣಿಗಳು ಮತ್ತು ಸೇವೆಗಳ 900ಕ್ಕೂ ಹೆಚ್ಚು ಅಧಿಕಾರಿಗಳನ್ನು ಇಸಿಐ ಮಾರ್ಗಸೂಚಿಗಳು ಮತ್ತು ಸೂಚನೆಗಳ ಪ್ರಕಾರ ವರ್ಗಾಯಿಸಲಾಗಿದೆ.

- Advertisement -

ವಿಧಾನಸಭೆ ಚುನಾವಣೆಗೂ ಮುನ್ನ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತು ವರದಿ ಸಲ್ಲಿಸಲು ಗುಜರಾತ್ ಸರ್ಕಾರ ವಿಫಲವಾಗಿದೆ ಎಂದು ಚುನಾವಣಾ ಆಯೋಗ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ಬೆನ್ನಿಗೇ ಗುಜರಾತ್‌ ಸರ್ಕಾರ ವರ್ಗಾವಣೆ ಪ್ರಕ್ರಿಯೆ ನಡೆಸಿದೆ.

ಇನ್ನೊಂದೆಡೆ, ಆರು ಹಿರಿಯ ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಇನ್ನೂ 51 ಅಧಿಕಾರಿಗಳು ಇನ್ನಷ್ಟೇ ವರ್ಗಾವಣೆ ಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ. ಉಳಿದ ಅಧಿಕಾರಿಗಳು ಆಯಾ ಪ್ರಧಾನ ಕಚೇರಿಗಳಿಗೆ ವರದಿ ಮಾಡಿಕೊಂಡಿರುವುದನ್ನು ಖಚಿತಪಡಿಸಬೇಕು ಎಂದು ಚುನಾವಣಾ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಅಲ್ಲದೇ, ಗುರುವಾರ ಸಂಜೆ 4.00 ಗಂಟೆಯೊಳಗೆ ವರದಿಯನ್ನು ಕಳುಹಿಸಬೇಕು ಎಂದು ತಾಕೀತು ಮಾಡಿದೆ.



Join Whatsapp