ಗುಜರಾತ್ ನರಮೇಧ 2002 : ಮೂವರು ಬ್ರಿಟಿಷ್ ಮುಸ್ಲಿಮರ ಮೃತದೇಹಗಳನ್ನು ಹಿಂದಿರುಗಿಸುವಂತೆ ಬ್ರಿಟನ್ ಸಂಸದೆ ಆಗ್ರಹ

Prasthutha|

ಲಂಡನ್: 2002 ರಲ್ಲಿ ಗುಜರಾತ್ ನಲ್ಲಿ ನಡೆದ ಮುಸ್ಲಿಮ್ ಹತ್ಯಾಕಾಂಡದ ವೇಳೆ ಹಿಂದುತ್ವ ಕಾರ್ಯಕರ್ತರಿಂದ ಹತ್ಯೆಗೀಡಾದ ಮೂವರು ಬ್ರಿಟಿಷ್ ಮುಸ್ಲಿಮರ ಮೃತದೇಹಗಳನ್ನು ಬ್ರಿಟನ್ ದೇಶಕ್ಕೆ ಹಿಂದಿರುಗಿಸುವಂತೆ ಯುನೈಟೆಡ್ ಕಿಂಗ್ಡಮ್ ಸಂಸದೆಯೊಬ್ಬರು ಆಗ್ರಹಿಸಿದ್ದಾರೆ.

- Advertisement -

ಫ್ರೆಬ್ರವರಿ 28, 2002 ರಂದು ನಾಲ್ಕು ಪ್ರವಾಸಿಗರಾದ ಶಕೀಲ್, ಸಯೀದ್ ಮತ್ತು ಆತನ ಸೋದರಳಿಯ ಇಮ್ರಾನ್ ಮತ್ತು ಸ್ನೇಹಿತ ಮುಹಮ್ಮದ್ ಅಸ್ವತ್ ಎಂಬವರು ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿ ಹಿಂತಿರುಗುತಿದ್ದ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ಮೂವರನ್ನು ಹತ್ಯೆ ನಡೆಸಲಾಗಿತ್ತು. ಇದರಲ್ಲಿ ಇಮ್ರಾನ್ ದಾವೂದ್ ಮಾತ್ರ ಬದುಕುಳಿದಿದ್ದ ಎಂದು ಬ್ರಿಟನ್ ಸಂಸದೆ ಕಿಮ್ ಲೀಡ್ ಬೀಟರ್ ತಿಳಿಸಿದ್ದಾರೆ.

ಇಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಗುಜರಾತ್ ನರಮೇಧದ ಕುರಿತು ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಸಂಸದರು, ಈ ಗಲಭೆಯಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪ್ರತಿ ಕುಟುಂಬದ ವಿಚಾರವು ಕೂಡ ವಿಭಿನ್ನವಾಗಿದೆ ಎಂದು ಅವರು ತಿಳಿಸಿದರು.

- Advertisement -

ಈ ಮಧ್ಯೆ ಮೃತ ಮೂವರ ಕುಟುಂಬದ ಸದಸ್ಯರು ಪ್ರಸಕ್ತ ನನ್ನ ಕ್ಷೇತ್ರದಲ್ಲಿ ವಾಸಿಸುತ್ತಿದ್ದು, ಅವರ ಸಾವಿನ ಕುರಿತು ವಿಚಾರಣೆ ನಡೆಸಲು ಯುನೈಟೆಡ್ ಕಿಂಗ್ಡಮ್ ಸರ್ಕಾರ ಅವಕಾಶ ನೀಡಬೇಕೆಂದು ಸಂಸದೆ ಒತ್ತಾಯಿಸಿದ್ದಾರೆ.

ಗುಜರಾತ್ ಗಲಭೆಯಲ್ಲಿ ಕನಿಷ್ಠ 1000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹೆಚ್ಚಿನವರು ಮುಸ್ಲಿಮರು ಎಂದು ಖಚಿತವಾಗಿ ಹೇಳಬಹುದು ಎಂದು ಅವರು ಒತ್ತಿ ಹೇಳಿದರು.



Join Whatsapp