ಗಾಂಧಿನಗರ್: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶದ ಹೊರಬಂದಿದ್ದು, ಗುಜರಾತ್ ನಲ್ಲಿ ಬಿಜೆಪಿ ಮತ್ತು ಮತ್ತು ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಗುಜರಾತ್ನಲ್ಲಿ 182 ವಿಧಾನಸಭಾ ಕ್ಷೇತ್ರಗಳಿದ್ದು ಬಿಜೆಪಿ 157 ಸ್ಥಾನಗಳಲ್ಲಿ ಜಯ ಗಳಿಸಿದೆ.
ಈ ಮಧ್ಯೆ ಮತ ಎಣಿಕೆ ವೇಳೆ ಗಾಂಧಿಧಾಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ ಬೈ ವೆಲ್ಜಿಬೈ ಸೋಲಂಕಿ ಎಂಬವರು ಸೋಲು ದೃಢವಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ವಿರುದ್ಧ ಮತಪೆಟ್ಟಿಗೆಯನ್ನು ತಿರುಚಿದ ಆರೋಪ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಭರತ್ ಬೈ ವೆಲ್ಜಿಬೈ, ಕೆಲವೊಂದು ಮತ ಪೆಟ್ಟಿಗೆಗಳನ್ನು ಸರಿಯಾಗಿ ಸೀಲ್ ಮಾಡಿರಲಿಲ್ಲ. ಹಾಗಾಗಿ 12,261 ಮತಗಳ ಅಂತರದಿಂದ ಸೋಲುವುದು ಅಸಾಧ್ಯ ಎಂದು ಹೇಳಿದ್ದಾರೆ.
ಗಾಂಧಿಧಾಮ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಸೋಲಂಕಿ, ಕುತ್ತಿಗೆಗೆ ಕೇಸರಿ ಸಾಲನ್ನು ಗಟ್ಟಿಯಾಗಿ ಸುತ್ತಿ ಉರುಳು ಹಾಕಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಅವರ ಜೊತೆ ಇದ್ದವರು ತಡೆದಿದ್ದಾರೆ.