ಗುಜರಾತ್: ಕಾಂಗ್ರೆಸ್ ಶಾಸಕ ಚಾವ್ಡಾ ರಾಜೀನಾಮೆ

Prasthutha|

ಅಹಮದಾಬಾದ್: ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಸಿ.ಜೆ. ಚಾವ್ಡಾ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -


ಮೆಹಸಾನಾ ಜಿಲ್ಲೆಯ ವಿಜಾಪುರ ಕ್ಷೇತ್ರದ ಶಾಸಕ ಚಾವ್ಡಾ ಅವರು ಶುಕ್ರವಾರ ಸ್ಪೀಕರ್ ಶಂಕರ್ ಚೌಧರಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 15ಕ್ಕೆ ಕುಸಿದಿದೆ.


ಚಾವ್ಡಾ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp