ಗುಜರಾತ್: ಕಾಂಗ್ರೆಸ್ ಶಾಸಕ ಭಗವಾನ್ ಬರಾದ್ ಬಿಜೆಪಿಗೆ ಸೇರ್ಪಡೆ

Prasthutha|

ಗುಜರಾತ್: ಗುಜರಾತ್ ವಿಧಾನ ಸಭಾ ಚುನಾವಣೆಗೂ ಮುನ್ನ ಪಕ್ಷಾಂತರ ಪರ್ವ ಬಿರುಸಿನಿಂದ ಸಾಗುತ್ತಿದ್ದು, ಹಿರಿಯ ಕಾಂಗ್ರೆಸ್ ಶಾಸಕ ಭಗವಾನ್ ಬರಾದ್ (63 ವರ್ಷ) ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.

- Advertisement -

2017 ರಲ್ಲಿ ಗಿರ್ ಸೋಮನಾಥ್ ಜಿಲ್ಲೆಯ ತಲಾಲಾ ಸ್ಥಾನವನ್ನು ಗೆದ್ದಿರುವ ಬರಾದ್, ಅಹಿರ್ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಅವರು 2007 ರಲ್ಲಿಯೂ ತಲಾಲಾ ಕ್ಷೇತ್ರದಲ್ಲಿ ಗೆದ್ದರು.ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕನಿಷ್ಠ 4,000 ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಚುನಾವಣಾ ಟಿಕೆಟ್ ಪಡೆಯಲು ಯಾವುದೇ ಪೂರ್ವ ಷರತ್ತು ವಿಧಿಸಿ ಬಿಜೆಪಿಗೆ ಸೇರಿಲ್ಲ ಎಂದು ಬರಾದ್ ಹೇಳಿದ್ದಾರೆ.

ಗುಜರಾತ್ ನಿಂದ 11 ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಮೋಹನ್ ಸಿಂಗ್ ರಾಥ್ವಾ ಬಿಜೆಪಿಗೆ ಸೇರ್ಪಡೆಯಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ರಾತ್ವಾ ಅವರು ಹಿರಿಯ ಪ್ರಮುಖ ಆದಿವಾಸಿ ನಾಯಕರಾಗಿದ್ದಾರೆ ಮತ್ತು ಪ್ರಸ್ತುತ ಮಧ್ಯ ಗುಜರಾತ್ ನ ಛೋಟಾ ಉದಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Join Whatsapp