ಗುಜರಾತ್ | ಬಿಜೆಪಿ ಸೇರುವಂತೆ ವಿದ್ಯಾರ್ಥಿನಿಯರಿಗೆ ನೋಟಿಸ್; ಪ್ರಾಂಶುಪಾಲೆ ರಾಜೀನಾಮೆ

Prasthutha|

ಸೂರತ್: ಗುಜರಾತ್’ನ ಭಾವನಗರದ ಕಾಲೇಜಿನ ವಿದ್ಯಾರ್ಥಿನಿಯರನ್ನು ಬಿಜೆಪಿ ಸೇರ್ಪಡೆಗೊಳ್ಳುವಂತೆ ಪ್ರಾಂಶುಪಾಲೆಯೋರ್ವರು ಸೂಚಿಸಿದ್ದು, ಬಳಿಕ ಆಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.

- Advertisement -

ಶ್ರೀಮತಿ ನರ್ಮದಾಬಾಯಿ ಛತ್ರಭುಜ ಗಾಂಧಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ರಜನಿಬಾಲಾ ಗೋಹಿಲ್ ಅವರು ಸಹಿ ಮಾಡಿರುವ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳಿಯ ಮಾಧ್ಯಮಗಳಲ್ಲಿ ವರದಿ ಆಗಿ ವಿವಾದವಾಗುತ್ತಿದ್ದಂತೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಪಾಸ್’ಪೋರ್ಟ್ ಗಾತ್ರದ ಫೋಟೋ ಮತ್ತು ಮೊಬೈಲ್ ಅನ್ನು ಕಾಲೇಜಿಗೆ ತರುವಂತೆ ಗೋಹಿಲ್ ಸೂಚಿಸಿದ್ದು, ಇದರೊಂದಿಗೆ ಅವರು ಹಿಂದೂ ರಾಷ್ಟ್ರೀಯವಾದಿ ಪಕ್ಷದ ಸದಸ್ಯರಾಗಬಹುದು ಎಂದು ನೋಟಿಸ್’ನಲ್ಲಿ ಉಲ್ಲೇಖಿಸಿದ್ದರು.

- Advertisement -

ಇದಕ್ಕೆ ಸಂಬಂಧಿಸಿದಂತೆ ಪ್ರಾಶುಂಪಾಲೆ ಮತ್ತು ಕಾಲೇಜು ಆಡಳಿತ ಮಂಡಳಿಗೆ ಭಾವನಗರ ವಿವಿಯ ಉಪಕುಲಪತಿ ಸೋಮವಾರ ಸಮನ್ಸ್ ಜಾರಿಗೊಳಿಸಿದ್ದರು.

ಬಿಜೆಪಿಯ ಬೂತ್ ಸಮಿತಿಯ ಸದಸ್ಯರಾಗಲು ಪ್ರತಿ ವಿದ್ಯಾರ್ಥಿನಿಯು ತನ್ನ ಪಾಸ್’ಪೋರ್ಟ್ ಗಾತ್ರದ ಫೋಟೋ ಮತ್ತು ಮೊಬೈಲ್ ಅನ್ನು ಕಡ್ಡಾಯವಾಗಿ ತರಬೇಕು ಎಂದು ಪ್ರಾಂಶುಪಾಲೆಯ ನೋಟಿಸ್’ನಲ್ಲಿ ಉಲ್ಲೇಖಿಸಲಾಗಿತ್ತು



Join Whatsapp