ಗುಜರಾತ್: ಬಿಜೆಪಿಯಿಂದ ಶಾಸಕರ ಸಹಿತ 12 ಮುಖಂಡರ ಅಮಾನತು

Prasthutha|

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಮಧ್ಯೆ ಅಸಾಮಾನ್ಯ ಬೆಳವಣಿಗೆಗಳು ಕಂಡುಬಂದಿದ್ದು ಪಕ್ಷೇತರರಾಗಿ ಸ್ಪರ್ಧಿಸಿರುವ 12 ಮುಖಂಡರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.

- Advertisement -


ಗುಜರಾತ್ ಮೊದಲ ಹಂತದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಏಳು ಬಂಡಾಯ ಮುಖಂಡರನ್ನು ಬಿಜೆಪಿ ಅಮಾನತುಗೊಳಿಸಿತ್ತು. ಈಗ ಪಕ್ಷದ ವಿಪ್ ಉಲ್ಲಂಘಿಸಿ ಎರಡನೇ ಹಂತದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿರುವ 12 ಮುಖಂಡರನ್ನು ಅಮಾನತುಗೊಳಿಸಲಾಗಿದೆ.


ಟಿಕೆಟ್ ದೊರೆಯದ ಕಾರಣ ಪಕ್ಷದ ವಿರುದ್ಧ ಬಂಡಾಯ ಎದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವವರಲ್ಲಿ ಗುಜರಾತ್ ವಿಧಾನಸಭೆಗೆ ಆರು ಬಾರಿ ಆಯ್ಕೆಯಾಗಿರುವ ಶಾಸಕ ಮಧು ಶ್ರೀವಾಸ್ತವ, ಮಾಜಿ ಶಾಸಕರಾದ ದಿನು ಪಟೇಲ್ ಹಾಗೂ ಧವಳ್‌ ಸಿಂಗ್ ಝಾಲ, ಮುಖಂಡರಾದ ಕುಲದೀಪ್‌ ಸಿಂಗ್ ರೌಲ್, ಖಾತುಭಾಯಿ ಪಗಿ, ಎಸ್‌ಎಂ ಕಾಂತ್, ಜೆ.ಪಿ ಪಟೇಲ್, ರಮೇಶ್ ಝಾಲ, ಅಮರ್ಶಿ ಝಾಲ, ರಾಮ್‌ ಸಿಂಗ್, ಮಾವ್ಜಿ ದೇಸಾಯಿ ಮತ್ತು ಲೆಬ್ಜಿ ಠಾಕೂರ್ ಸೇರಿದ್ದಾರೆ.

Join Whatsapp