ಆಹಾರ ಉತ್ಸವದ ಮೇಲೆ ಬಜರಂಗದಳ ದಾಳಿ: ಫ್ಲೆಕ್ಸ್ ಗೆ ಬೆಂಕಿ ಹಚ್ಚಿ ದಾಂಧಲೆ

Prasthutha|

ಅಹಮದಾಬಾದ್: ರೆಸ್ಟೋರೆಂಟ್ ವೊಂದರಲ್ಲಿ ನಡೆಯುತ್ತಿದ್ದ ಪಾಕಿಸ್ತಾನಿ ಆಹಾರ ಉತ್ಸವದ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿ, ಕಾರ್ಯಕ್ರಮದ ಫ್ಲೆಕ್ಸ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ ನಂತರ ಆಯೋಜಕರಿಗೆ ಬೆದರಿಕೆ ಹಾಕಿದ ಘಟನೆ ಗುಜರಾತಿನ ಸೂರತ್ ನಲ್ಲಿ ನಡೆದಿದೆ.

- Advertisement -

ಪಾಕಿಸ್ತಾನಿ ಆಹಾರ ಉತ್ಸವವನ್ನು ರದ್ದುಗೊಳಿಸುವಂತೆ ಸಂಘಪರಿವಾರದ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ಡಿಸೆಂಬರ್ 12 ರಿಂದ 22ರವರೆಗೆ ಆಯೋಜಿಸಲಾಗಿದ್ದ ಆಹಾರೋತ್ಸವವನ್ನು ರದ್ದುಗೊಳಿಸುವಂತೆ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ಮಾಲಿಕ ಸಂದೀಪ್ ದಾವರ್ ಅವರಿಗೆ ಬಜರಂಗದಳದ ಕಾರ್ಯಕರ್ತರು ಬೆದರಿಕೆ ಹಾಕಿದರು.

ರೆಸ್ಟೋರೆಂಟ್ ಆಗಮಿಸಿ ಪಾಕಿಸ್ತಾನಿ ಆಹಾರೋತ್ಸವವನ್ನು ಆಯೋಜಿಸದಂತೆ ಸಿಬ್ಬಂದಿಯನ್ನು ಬೆದರಿಸಿದ ಬಜರಂಗದಳದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ಕಟ್ಟಡದ ಮೇಲೆ ಅಳವಡಿಸಿದ್ದ ಫ್ಲೆಕ್ಸ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು.
ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಜರಂಗದಳದ ಪುಂಡಾಟಿಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಾರ್ಯಕ್ರಮದ ಸಂಘಟಕರಾದ ಸಂದೀಪ್ ದಾವರ್ ಅವರು ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಬಜರಂಗದಳ ಮುಖಂಡ ದೇವಿಪ್ರಸಾದ್ ದುಬೆ ಮಾಧ್ಯಮಕ್ಕೆ ತಿಳಿಸಿದ್ದಾರೆ.



Join Whatsapp