ಗುಜರಾತ್ ವಿಧಾನಸಭಾ  ಚುನಾವಣೆ:  ಮುಂದುವರಿದ  ಕಾಂಗ್ರೆಸ್ ಶಾಸಕರ ಪಕ್ಷಾಂತರ ಪರ್ವ

Prasthutha|

ಗಾಂಧಿನಗರ: ಗುಜರಾತ್ ನ ದಾಹೋಡ್ ಜಿಲ್ಲೆಯ ಝಲೋಡ್ ನ ಕಾಂಗ್ರೆಸ್ ಶಾಸಕ ಭವೇಶ್ ಕಟಾರಾ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಮೋಹನ್ ಸಿಂಗ್ ರಾಥ್ವಾ ಮತ್ತು ಭಗವಾನ್ ಬರಾದ್ ನಂತರ ಭವೇಶ್ ಕಟಾರಾ ಅವರು ಕಳೆದ ಎರಡು ದಿನಗಳಲ್ಲಿ ರಾಜೀನಾಮೆ ನೀಡಿದ ಮೂರನೇ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಕಟಾರಾ ಅವರು ಬುಧವಾರ ರಾತ್ರಿ ವಿಧಾನಸಭಾ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರ ನಿವಾಸಕ್ಕೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

- Advertisement -

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿರುವ ಸಮಯದಲ್ಲೇ ರಾಜೀನಾಮೆ ಬಂದಿರುವ ಹಿನ್ನೆಲೆಯಲ್ಲಿ ಕಟಾರಾ ಅವರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ಶಾಸಕರಾಗಿ ರಾಜೀನಾಮೆ ನೀಡಿದ ನಂತರ ರಾಥ್ವಾ ಮತ್ತು ಬರಾದ್ ಕೂಡ ಕೇಸರಿ ಪಾಳಯಕ್ಕೆ ಸೇರಿದ್ದಾರೆ.

ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಗುಜರಾತ್ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. 



Join Whatsapp