ಗುಜರಾತ್: ನಿವೃತ್ತಿಯ ನಂತರ ಬಿಜೆಪಿ ಸೇರಿದ ಐಪಿಎಸ್ ಅಧಿಕಾರಿ

Prasthutha|

►ಪ್ರತಿಭಟನಾ ನಿರತ ದಲಿತರನ್ನು ಹತ್ಯೆಗೈದು ವಿವಾದಕ್ಕೆ ಗುರಿಯಾಗಿದ್ದ ಹರಿಕೃಷ್ಣ ಪಟೇಲ್

- Advertisement -

ಗಾಂಧಿನಗರ: ಗುಜರಾತ್ ನ ಹಿರಿಯ ಐಪಿಎಸ್ ಅಧಿಕಾರಿ ಹರಿಕೃಷ್ಣ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮೂಲತಃ ಅಮ್ರೇಲಿ ಜಿಲ್ಲೆಯವರಾದ ಹರಿಕೃಷ್ಣ ಪಟೇಲ್ ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು.
ಹರಿಕೃಷ್ಣ ಪಟೇಲ್ 1999ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ವಡೋದರಾ ರೇಂಜ್‌ನಲ್ಲಿ ಐಜಿ ಆಗಿದ್ದ ಅವರು ಈ ವರ್ಷದ ಜೂನ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಿದ್ದರು.

- Advertisement -

ಅಮ್ರೇಲಿಯಲ್ಲಿ ನಡೆದ ಬಿಜೆಪಿ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಸಿ.ಆರ್.ಪಟೇಲ್ ಹರಿಕೃಷ್ಣ ಪಟೇಲ್ ಅವರು ಬಿಜೆಪಿಗೆ ಸೇರ್ಪಡೆಯಾಗುವುದನ್ನು ಘೋಷಿಸಿದರು. ತಾನು ಬಿಜೆಪಿ ಸೇರಲು ನಿರ್ಧರಿಸಿದ್ದು, ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಹರಿಕೃಷ್ಣ ಪಟೇಲ್ ಅವರು ಇಂಡಿಯನ್ ಎಕ್ಸ್’ಪ್ರೆಸ್’ಗೆ ತಿಳಿಸಿದ್ದಾರೆ.

ಹರಿಕೃಷ್ಣ ಪಟೇಲ್ ಈ ಹಿಂದೆ ಪ್ರತಿಭಟನಾ ನಿರತ ದಲಿತರನ್ನು ಗುಂಡಿಕ್ಕಿ ಹತ್ಯೆಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದ ಅಧಿಕಾರಿಯಾಗಿದ್ದಾರೆ. 2012ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಂಡಿನ ದಾಳಿ ನಡೆದಿತ್ತು. ಹರಿಕೃಷ್ಣ ಪಟೇಲ್ ಆಗ ಜಾಮ್ ನಗರ ಎಸ್ಪಿ ಆಗಿದ್ದರು. ಪಟೇಲ್ ಆದೇಶದಂತೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ದಲಿತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.



Join Whatsapp