ಅಧಿಕೃತ ಸಂಖ್ಯೆಗಿಂತ 6000 ಹೆಚ್ಚುವರಿ ಕೋವಿಡ್ – 19 ಸಾವನ್ನು ಒಪ್ಪಿಕೊಂಡ ಗುಜರಾತ್ ಸರ್ಕಾರ

Prasthutha|

ಸೂರತ್: ಅಧಿಕೃತ ಸಂಖ್ಯೆಗಿಂತಲೂ ಅಧಿಕ ಮಂದಿ ಕೋವಿಡ್ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ಗುಜರಾತ್ ಸರ್ಕಾರ ಒಪ್ಪಿಕೊಂಡಿದೆ ಎಂದು ಅದು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಿಂದ ಬಹಿರಂಗವಾಗಿದೆ.

- Advertisement -

ಸ್ಮಶಾನ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಆಧಾರದಲ್ಲಿ ಮಾಧ್ಯಮಗಳು ಸರಕಾರದ ಅಧಿಕೃತ ಸಾವಿನ ಸಂಖ್ಯೆಗಿಂತ ಹೆಚ್ಚಿನ ಪ್ರಮಾನದಲ್ಲಿ ಕೋವಿಡ್ ಮರಣಗಳಾಗಿವೆ ಎಂದು ವರದಿ ಮಾಡಿದ್ದವು. ಏಪ್ರಿಲ್ ಮತ್ತು ಜೂನ್ ನಡುವೆ ಎರಡನೇ ಅಲೆಯ ಸಂದರ್ಭದಲ್ಲಿ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತದ ದಾಖಲೆಯ ಹೆಚ್ಚಿನ ಸಾವಿ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಇತ್ತೀಚೆಗೆ ಆರೋಗ್ಯ ಇಲಾಖೆಯ ತನ್ನ ವರದಿಯಲ್ಲಿ ಸಾವಿನ ಸಂಖ್ಯೆ 10, 099 ಎಂದು ತಿಳಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ತವರಾದ ಗುಜರಾತ್ ನಲ್ಲಿ ಮೃತರಿಗೆ ಪರಿಹಾರ ಕೋರಿ 22,557 ಕುಟುಂಬಸ್ಥರು ಅರ್ಜಿಗಳನ್ನು ಸಲ್ಲಿಸಿದ್ದರು ಮತ್ತು ಆ ಪೈಕಿ 16,175 ಅರ್ಜಿಗಳನ್ನು ಅನುಮೋದಿಸಲಾಗಿದೆ ಎಂದು ಸರ್ಕಾರ ಸುಪ್ರೀಮ್ ಕೋರ್ಟ್ ಗೆ ಅಫಿದಾವಿತ್ ಸಲ್ಲಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಅಧಿಕಾರಿಯೊಬ್ಬರು, ಒಟ್ಟು 40 ಸಾವಿರ ಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿದ್ದು, ಪ್ರತಿ ಸಂತ್ರಸ್ತರಿಗೂ ತಲಾ 50 ಸಾವಿರ ರೂಪಾಯಿಯಂತೆ ಸುಮಾರು ಅರ್ಧದಷ್ಟನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ವರದಿಯು ಸಮರ್ಪಕವಾಗಿಲ್ಲ ಮತ್ತು ಸಾವಿನ ಇನ್ನೂ ಹೆಚ್ಚಿರಬಹುದೆಂದು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ವಕ್ತಾರ ಮನೀಶ್ ದೋಷಿ ಆರೋಪಿಸಿದ್ದಾರೆ. ಗುಜರಾತ್ ಸರ್ಕಾರ ಕೋವಿಡ್ ಪ್ರಕರಣ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ ವರದಿ ಮಾಡುತ್ತಿದೆ. ಸಮೀಕ್ಷೆ ಪ್ರಕಾರ ಕನಿಷ್ಠ 55,000 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp