ಗುಜರಾತ್: ಕ್ರಿಕೆಟ್ ವೀಕ್ಷಿಸಲು ತೆರಳಿದ್ದ ಮುಸ್ಲಿಂ ಯುವಕನನ್ನು ಥಳಿಸಿ ಕೊಲೆ

Prasthutha|

ಗುಜರಾತ್: ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ತೆರಳಿದ್ದ 23 ವರ್ಷದ ಯುವಕನನ್ನು ಗುಂಪೊಂದು ಬರ್ಬರವಾಗಿ ಹೊಡೆದು ಕೊಂದ ಘಟನೆ ಗುಜರಾತ್‌ನ ಚಿಖೋದ್ರಾದಲ್ಲಿ ನಡೆದಿದೆ.

- Advertisement -

ಸಲ್ಮಾನ್ ವೋಹ್ರಾ ಕೊಲೆಗೀಡಾದ ಯುವಕ.

ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪೋಲ್ಸನ್ ಕಂಪೌಂಡ್ ನಿವಾಸಿ ಸಲ್ಮಾನ್ ಪತ್ನಿ ಒಂದು ತಿಂಗಳ ಗರ್ಭಿಣಿಯಾಗಿದ್ದಾರೆ.

- Advertisement -

ದಿ ಕ್ವಿಂಟ್ ವರದಿಯ ಪ್ರಕಾರ, ಮುಸ್ಲಿಂ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಸಹಿಸದ ಪ್ರೇಕ್ಷಕರ ಒಂದು ಗುಂಪು ಪದೇ ಪದೇ ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಿತ್ತು. ಇದೇ ವೇಳೆ ದ್ವಿಚಕ್ರವಾಹನದಲ್ಲಿದ್ದ ಕೆಲವರು ಬಂದು ಸಲ್ಮಾನ್ ಜೊತೆ ಜಗಳವಾಡಿದ್ದು, ಸ್ಟ್ಯಾಂಡ್‌ನಿಂದು ಬೈಕ್ ತೆಗೆಯುವಂತೆ ಹೇಳಿದ್ದಾರೆ. ಬಳಿಕ ಗುಂಪು ಸಲ್ಮಾನ್‌ ಮೇಲೆ ನಿರ್ದಯವಾಗಿ ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಲ್ಮಾನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರಿಗೆ ಸುಮಾರು 17 ಹೊಲಿಗೆಗಳು ಹಾಕಿದ್ದರೆ, ಮತ್ತೊಬ್ಬನಿಗೆ ಸುಮಾರು 7 ಹೊಲಿಗೆ ಹಾಕಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಈ ಎಲ್ಲ ಆರೋಪಿಗಳನ್ನು ಏಳು ದಿನಗಳ ರಿಮಾಂಡ್‌ಗೆ ಕಳುಹಿಸಿದೆ.

Join Whatsapp