ಗುಜರಾತ್: 11 ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಮೋಹನ್ ಸಿಂಗ್ ರಾಥ್ವಾ ಬಿಜೆಪಿಗೆ ಸೇರ್ಪಡೆ

Prasthutha|

ಗುಜರಾತ್: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು 11 ಬಾರಿ ಶಾಸಕರಾಗಿರುವ ಮೋಹನ್ ಸಿಂಗ್ ರಾಥ್ವಾ ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

- Advertisement -

ಪ್ರಮುಖ ಬುಡಕಟ್ಟು ನಾಯಕರಾಗಿರುವ ರಾಥ್ವಾ ಪ್ರಸ್ತುತ ಮಧ್ಯ ಗುಜರಾತಿನ ಛೋಟಾ ಉದಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ, ಅವರು ಬಿಜೆಪಿಯ ಜಶುಭಾಯಿ ರಾಥ್ವಾ ಅವರೊಂದಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿ ಅಂತಿಮವಾಗಿ ಕೇವಲ 1,000 ಹೆಚ್ಚು ಮತಗಳಿಂದ ಗೆದ್ದಿದ್ದರು.

ನಮ್ಮ ಬುಡಕಟ್ಟು ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಕೆಲಸಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದರು.

Join Whatsapp