ನವದೆಹಲಿ: ಸಂಸ್ಥೆಯ ಹಣಕಾಸು ಸಲಹಾ ಸಮಿತಿಯ ವರದಿಯ ಮೇಲೆ ಭಾರತ್ ಪೇ ನಿರ್ದೇಶಕ ಮಂಡಳಿಯು ಅದರ ಎಂ.ಡಿ. ಅಶ್ನೀರ್ ಗ್ರೋವರ್ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿ ಸಭೆ ಕರೆದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಅದರ ನಿರ್ವಾಹಣಾ ನಿರ್ದೇಶಕ ಅಶ್ನೀರ್ ಗ್ರೋವರ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕರೆದಿರುವ ಬೋರ್ಡ್ ಮೀಟಿಂಗಿನಲ್ಲಿ ಇವರ ವಿಷಯ ಚರ್ಚೆಗೆ ಬರುತ್ತದೆ ಎಂದು ತಿಳಿಯುತ್ತಲೇ ಆ ಸಭೆಗೆ ಮೊದಲೇ ಗ್ರೋವರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮುಂದೆ ಭಾರತ್ ಪೇ ನಿರ್ದೇಶಕ ಮಂಡಳಿ ಯಾವ ರೀತಿ ತೀರ್ಮಾನಿಸುವುದೆಂದು ಸಭೆಗೆ ಮೊದಲೇ ಹೇಳುವುದು ಸಾಧ್ಯವಿಲ್ಲ ಎಂದು ನಿರ್ದೇಶಕ ಮಂಡಳಿಯ ಪರವಾಗಿ ಹೇಳಿಕೆ ನೀಡಲಾಗಿದೆ.