ಆ. 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಯಾರು ಅರ್ಜಿ ಸಲ್ಲಿಸಬಹುದು?

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್’ನ ಬಹು ನಿರೀಕ್ಷಿತ 5 ಗ್ಯಾರಂಟಿಗಳನ್ನು ಶುಕ್ರವಾರ ಘೋಷಣೆ ಮಾಡಿದ್ದಾರೆ. ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆಯೂ ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾಗಿದ್ದು, ಇದು ಆಗಸ್ಟ್ 15 ರಿಂದ ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

- Advertisement -


ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ, ಮನೆ ಯಜಮಾನಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡುತ್ತೇವೆ. ಇದಕ್ಕಾಗಿ ಮನೆ ಯಜಮಾನಿ ಯಾರು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಹಾಗೂ ಅವರ ಬಳಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ:

  • ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೊದಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು.
  • ಮನೆಯ ಯಜಮಾನಿ ಯಾರು ಎಂಬುದನ್ನು ಆಯಾ ಮನೆಯವರೇ ಉಲ್ಲೇಖಿಸಬೇಕು.
  • ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಹಾಕಬೇಕು.
  • ಜೂನ್ 15 ರಿಂದ ಜುಲೈ 15 ರ ಅವಧಿಯಲ್ಲಿ ಅರ್ಜಿ ಹಾಕಬೇಕು.

  • ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಂದು ಯೋಜನೆ ಜಾರಿಗೆ ಬರಲಿದೆ. ಮನೆಯ ಯಜಮಾನಿ ಅತ್ತೆಯೋ ಅಥವಾ ಸೊಸೆಯೋ ಎಂಬುದನ್ನು ಆಯಾ ಮನೆಯವರೇ ಅರ್ಜಿಯಲ್ಲಿ ಉಲ್ಲೇಖಿಸಿ, ಸಂಬಂಧಿಸಿದ ದಾಖಲಾತಿ ಸಲ್ಲಿಸಬೇಕು. ಆದರೆ ಆಕೆಗೆ 18 ವರ್ಷ ತುಂಬಿರಬೇಕು. ಆಗಸ್ಟ್ 15 ಕ್ಕೆ ಕುಟುಂಬ ಯಜಮಾನಿಯ ಖಾತೆಗೆ ಹಣ ಬರುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರು ಎಲ್ಲರೂ ಇದಕ್ಕಾಗಿ ಅರ್ಜಿ ಹಾಕಬಹುದು. ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರಿಗೂ ಗೃಹಲಕ್ಷ್ಮಿ ಸಿಗಲಿದೆ. ಅಂಗವಿಕಲ, ವಿಧವಾವೇತನ ಸೇರಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರಿಗೂ ಇದು ಅನ್ವಯ ಆಗುತ್ತದೆ. ಕುಟುಂಬದ ಯಜಮಾನಿಗೆ ಮಾತ್ರ ಹಣ ಬರುತ್ತದೆ. ಅರ್ಜಿ ಹಾಕಿದ ಮೇಲೆ ಅಕೌಂಟ್, ಆಧಾರ್, ಮಾಹಿತಿ ಪಡೆದು ಯೋಜನೆ ಜಾರಿಗೊಳಿಸುತ್ತೇವೆ. ಯಾವ ಷರತ್ತು ನಿಗದಿ ಮಾಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ