ಗ್ರೆಟಾ ಥನ್ಬರ್ಗ್ ಬಡ ಮಕ್ಕಳ ಮುಂದೆ ಊಟ ಮಾಡಿದ್ದು ನಿಜವೇ? | ಟ್ರೋಲಿಗರ ಎಡಿಟಿಂಗ್ ಸ್ಕಿಲ್ ಬಗ್ಗೆ ಇಲ್ಲಿದೆ ಮಾಹಿತಿ!

Prasthutha|

‘ಟೂಲ್ ಕಿಟ್’ ಪ್ರಕರಣದ ನಡುವೆಯೇ, ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ಬಡ ಮತ್ತು ಹಸಿವಿನಿಂದ ಬಳಲುತ್ತಿರುವ ಮಕ್ಕಳ ಮುಂದೆ ಐಷಾರಾಮಿ ಊಟ ಮಾಡುವುದನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. #AskGretaWhy ಎಂಬ ಹ್ಯಾಶ್‌ ಟ್ಯಾಗ್‌ ನೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು.

- Advertisement -

ರೈತರ ಆಂದೋಲನವನ್ನು ಬೆಂಬಲಿಸಿ ಟ್ವೀಟ್ ಮಾಡಿದ ನಂತರ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಭಾರತದಲ್ಲಿ ಸಾಕಷ್ಟು ಬಿರುಗಾಳಿ ಸೃಷ್ಟಿಸಿದ್ದರು. ಆ ಮೂಲಕ ಭಾರತದಲ್ಲಿ ಬಿಜೆಪಿಗರ ಕೆಂಗಣ್ಣಿಗೆ ಥನ್ಬರ್ಗ್ ಗುರಿಯಾಗಿದ್ದಳು.

ಈ ನಡುವೆ, ಬಡ ಮಕ್ಕಳ ಗುಂಪು ಕಿಟಕಿಯ ಮೂಲಕ ತನ್ನನ್ನು ದಿಟ್ಟಿಸುತ್ತಿರುವಾಗ ಗ್ರೆಟಾ ಆಹಾರವನ್ನು ಸೇವಿಸುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸಿ ಯುವ ಪರಿಸರ ಕಾರ್ಯಕರ್ತರ ಸಮಗ್ರತೆಯನ್ನು ಪ್ರಶ್ನಿಸುವ ಯತ್ನ ಮಾಡಲಾಗಿದೆ. ಗ್ರೆಟಾರನ್ನು ನಕಲಿ ಕಾರ್ಯಕರ್ತೆ ಎಂದು ಕರೆದ ಕೆಲವರು, #AskGretaWhy ಎಂಬ  ಹ್ಯಾಶ್‌ ಟ್ಯಾಗ್‌ ನೊಂದಿಗೆ ಚಿತ್ರವನ್ನು ಹಂಚಿಕೊಂಡು ಆಕೆಯನ್ನು ಪ್ರಶ್ನಿಸಿದ್ದಾರೆ.

- Advertisement -

ಜನವರಿ 22, 2019ರಲ್ಲಿ ಸ್ವತಃ ಥನ್ಬರ್ಗ್ ತನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ “ಡೆನ್ಮಾರ್ಕ್ ನಲ್ಲಿ ಊಟ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಚಿತ್ರವನ್ನು, 2007ರ ಮಧ್ಯ ಆಫ್ರಿಕಾದ ಬೊಡೌಲಿ ಎಂಬ ಹಳ್ಳಿಯಲ್ಲಿ ಬಡ ಮಕ್ಕಳ ಚಿತ್ರದ ಜೊತೆ ತಿರುಚಲಾಗಿದೆ. ಆ ಮೂಲಕ, ಗ್ರೆಟಾ ಬಗ್ಗೆ ಭಾರತೀಯರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಲಾಗಿದೆ.

ರೈತ ಆಂದೋಲನ ಬೆಂಬಲಿಸಿದ ಬೆನ್ನಲ್ಲೇ ಜಾಗತಿಕ ಮಟ್ಟದ ಹಲವು ನಾಯಕರಿಗೆ ವಿವಿಧ ರೀತಿಯ ಆಕ್ಷೇಪ ಎದುರಿಸಬೇಕಾಗಿ ಬಂದಿದೆ. ಈಗ ಫೋಟೋ ಎಡಿಟ್ ಮತ್ತು ಫೇಕ್ ನ್ಯೂಸ್ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.

Join Whatsapp